ಗಾನವಿ ಕೊಟ್ಟ ಕೌಂಟರ್ಗೆ ಸೈಲೆಂಟ್ ಆದ ತಾಂಡವ್ ರಾಮ್
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಉತ್ತಮ ಆಡುತ್ತಿದ್ದಾರೆ. ಗಾನವಿ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಈಗ ಸೈಲೆಂಟ್ ಆಗಿ ಕೌಂಟರ್ ಕೊಟ್ಟಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ತಾಂಡವ್ ರಾಮ್ ನಡೆಯು ಸಾಕಷ್ಟು ಪ್ರಶ್ನೆಗಳನ್ನು ಮೂಡಿಸಿದೆ. ಇದಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಗಾನವಿ ಕೊಟ್ಟ ಕೌಂಟರ್ಗೆ ತಾಂಡವ್ ರಾಮ್ ಸೈಲೆಂಟ್ ಆಗಿದ್ದಾರೆ. ‘ಕ್ಯಾಪ್ಟನ್ಸಿ ಓಟಕ್ಕೆ ಗಾನವಿ ಅರ್ಹಲ್ಲ’ ಎಂದರು ತಾಂಡವ್. ಆಗ ಗಾನವಿ, ‘ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್ ಎಂದೆ ಗುರುತಿಸಿಕೊಳ್ಳುತ್ತೀರಿ. ನೀವು ಏನೂ ಆಡುತ್ತಿಲ್ಲ ಎಂದು ಹೊರಕ್ಕೆ ಕಳುಹಿಸಿ ಮತ್ತೆ ಕರೆತರಲಾಯಿತು. ಆದರೂ, ನೀವು ಬದಲಾಗಿಲ್ಲ’ ಎಂದು ಗಾನವಿ ಅವರು ತಾಂಡವ್ ರಾಮ್ಗೆ ಹೇಳಿದರು. ಇದನ್ನು ಕೇಳಿ ತಾಂಡವ್ ಸೈಲೆಂಟ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

