ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ

|

Updated on: Oct 25, 2024 | 6:55 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರಿಂದ ಜಗದೀಶ್ ಹಾಗೂ ರಂಜಿತ್ ಹೊರಗೆ ಹೋದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಹನುಮಂತು ತನ್ನ ಮಾತು, ಹಾವ-ಭಾವದಿಂದ ಮನೆಗೆ ಹೊಸ ಕಳೆ ತಂದಿದ್ದಾನೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಕ್ಕೆ ಹನುಮಂತು ಎಂಟ್ರಿ ಕೊಟ್ಟಿದ್ದಾನೆ. ಹನುಮಂತು ಎಂಟ್ರಿ ಕೊಟ್ಟ ಮೇಲೆ ಮನೆಯ ಈಕ್ವೇಷನ್ ತುಸು ಬದಲಾಗಿದೆ. ಹನುಮಂತುವಿನ ಮುಗ್ಧತೆ ಮನೆಯ ಇತರೆ ಸದಸ್ಯರಿಗೆ ತಮಾಷೆಯಾಗಿ ಕಾಣುತ್ತಿದೆ. ಈಗ ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳು ತಲೆ ಎತ್ತಿದ್ದು ಎರಡೂ ಗುಂಪುಗಳು ಜಿದ್ದಾ-ಜಿದ್ದಿನಿಂದ ಟಾಸ್ಕ್​​ನಲ್ಲಿ ತಮ್ಮನ್ನು ತೊಡಗಿಕೊಂಡಿವೆ. ಈ ಜಿದ್ದಾಜಿದ್ದಿನ ನಡುವೆಯೂ ಹನುಮಂತನ ಕಾಮಿಡಿ ಮುಂದುವರೆದಿದೆ. ಹನುಮಂತು ತನ್ನ ತಂಡದ ಕ್ಯಾಪ್ಟನ್ ಹೆಸರು ಹೇಳಲು ಬಲು ನಾಚಿಕೊಂಡಿದ್ದಾನೆ. ವಿಡಿಯೋ ತಮಾಷೆಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ