ಕುಮಾರಿ ವೇಸ್ಟ್ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಹಾಗೂ ಕುಮಾರಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ ವೇಳೆ ಕುಮಾರಿಗೆ ವೇಸ್ಟ್ ಪೀಸ್ ಟ್ಯಾಗ್ ನೀಡಿದ ಸೌಂದರ್ಯಾ ವಿರುದ್ಧ ಸ್ಪರ್ಧಿ ಆಕ್ರೋಶ ಹೊರಹಾಕಿದ್ದು, ಇಬ್ಬರ ನಡುವೆ ನಡೆದ ಈ ನಗುವಿನ ಹಾಗೂ ಆಕ್ರೋಶದ ಜಗಳ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಸ್ಪರ್ಧಿಗಳ ನಡುವಿನ ವಾಗ್ವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇತ್ತೀಚಿನ ಸಂಚಿಕೆಯಲ್ಲಿ ಸೌಂದರ್ಯಾ ಹಾಗೂ ಕುಮಾರಿ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಸೌಂದರ್ಯಾ ಅವರು ಕುಮಾರಿ ಅವರಿಗೆ ‘#ವೇಸ್ಟ್ ಪೀಸ್’ ಎಂಬ ಟ್ಯಾಗ್ ನೀಡಿ, ‘ಕುಮಾರಿ ಅವರ ಕೊಡುಗೆ ಈ ಮನೆಗೆ ಕಮ್ಮಿ ಇದೆ’ ಎಂದು ಕಾರಣ ಕೊಟ್ಟಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಕುಮಾರಿ, ಸೌಂದರ್ಯಾ ವಿರುದ್ಧ ಜೋರಾಗಿ ಧ್ವನಿ ಎತ್ತಿ ಪ್ರತ್ಯುತ್ತರ ನೀಡಿದ್ದಾರೆ. ಮಾತಿನ ಸಮರದಲ್ಲಿ ಸೌಂದರ್ಯಾ ‘ನೀನೇ ವೇಸ್ಟ್ ಪೀಸ್, ನಿನಗೆ ನಾನು ಈ ಮನೆಯಲ್ಲಿ ಚಾನ್ಸ್ ಕೊಟ್ಟಿದ್ದೇನೆ’ ಎಂದು ಹೇಳಿದರು. ಇಬ್ಬರೂ ಪರಸ್ಪರ ಸವಾಲು ಹಾಕಿಕೊಳ್ಳುತ್ತಾ ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಎದುರಲ್ಲೇ ಜಗಳವಾಡಿರುವುದು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
