ಬಿಗ್ಬಾಸ್ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮನೆ ಮಂದಿಯಿಂದ ‘ಹಿಟ್-ಫ್ಲಾಪ್’ ಆಟ ಆಡಿಸಿದ್ದಾರೆ. ಅಂದಹಾಗೆ ಈ ವಾರ ಮನೆಯಲ್ಲಿ ಹಿಟ್ ಆಗಿದ್ದು ಯಾರು? ಫ್ಲಾಪ್ ಆಗಿದ್ದು ಯಾರು?
ಬಿಗ್ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ನಿನ್ನೆ ಮೊದಲ ವಾರದ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್, ಲಾಯರ್ ಜಗದೀಶ್, ಮೊದಲ ಕ್ಯಾಪ್ಟನ್ ಹಂಸಾ ಇನ್ನಿತರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಕೆಲವರ ಆಟವನ್ನು ಪ್ರಶಂಸಿಸಿದರೆ ಕೆಲವರ ಆಟವನ್ನು ಟೀಕೆ ಮಾಡಿದರು. ಇನ್ನು ಭಾನುವಾರವೂ ಪಂಚಾಯಿತಿ ಮುಂದುವರೆದಿದ್ದು, ಮನೆಯ ಸದಸ್ಯರಿಂದ ಕೆಲ ಆಟ ಆಡಿಸಿದ್ದಾರೆ. ಹಿಟ್ ಮತ್ತು ಫ್ಲಾಪ್ ಹೆಸರಿನ ಟ್ಯಾಗ್ಗಳನ್ನು ನೀಡಿ ಮನೆಯಲ್ಲಿ ಯಾರು ಹಿಟ್ ಆಗಿದ್ದಾರೆ ಯಾರು ಫ್ಲಾಪ್ ಆಗಿದ್ದಾರೆ ಅವರಿಗೆ ಹಾಕಿ ಎಂದಿದ್ದಾರೆ. ಮನೆಯವರ ಪ್ರಕಾರ ಹಿಟ್ ಯಾರು? ಫ್ಲಾಪ್ ಯಾರಾಗಿದ್ದಾರೆ ಎಂಬುದನ್ನು ತಿಳಿಯಲು ಇಂದು ರಾತ್ರಿಯ ಬಿಗ್ಬಾಸ್ ಎಪಿಸೋಡ್ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ