ಡ್ರೋನ್​ ಪ್ರತಾಪ್​ ಮೇಲೆ ಇರುವ ಕೇಸ್​ ಒಂದಲ್ಲ, ಎರಡಲ್ಲ; ಎಲ್ಲವನ್ನೂ ವಿವರಿಸಿದ ಲಾಯರ್​

| Updated By: ಮದನ್​ ಕುಮಾರ್​

Updated on: Jan 18, 2024 | 7:50 PM

ಡ್ರೋನ್​ ಪ್ರತಾಪ್​ ಅವರ ಮೇಲೆ ಬೀಳಲಿರುವುದು ಒಂದು ಕೇಸ್​ ಮಾತ್ರವಲ್ಲ. ಆ ಕುರಿತು ವಕೀಲರು ಹೇಳಿಕೆ ನೀಡಿದ್ದಾರೆ. ‘ಹಲವಾರು ಕೇಸ್​ಗಳು ಬೀಳುತ್ತವೆ. ಪ್ರಯಾಗ್​ ಅವರಿಂದಲೇ ಇನ್ನೂ ಎರಡು-ಮೂರು ಕೇಸ್​ಗಳನ್ನು ಹಾಕಲಾಗುತ್ತದೆ. ಕಾನೂನಿನ ರೀತಿಯಲ್ಲಿ ನಡೆದುಕೊಂಡ ಅಧಿಕಾರಿ ಬಗ್ಗೆ ಪ್ರತಾಪ್​ ಆರೋಪ ಮಾಡಿದ್ದಾರೆ’ ಎಂದು ವಕೀಲರು ಹೇಳಿದ್ದಾರೆ.

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಡ್ರೋನ್​ ಪ್ರತಾಪ್​ (Drone Prathap) ಅವರು ಆಡಿದ ಕೆಲವು ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ಅವರ ಹೇಳಿಕೆಯಿಂದ ಮಾನಹಾನಿ ಆಗಿದೆ ಎಂದು ಡಾಕ್ಟರ್ ಪ್ರಯಾಗ್ ಅವರು ಆರೋಪ ಮಾಡಿದ್ದಾರೆ. ಪ್ರತಾಪ್​ ವಿರುದ್ಧ 49 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ (Defamation Case) ಹೂಡಲಾಗಿದೆ. ಈ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಪ್ರತಾಪ್​ ಅವರ ಮೇಲೆ ಬೀಳಲಿರುವುದು ಒಂದು ಕೇಸ್​ ಮಾತ್ರವಲ್ಲ. ಆ ಕುರಿತು ವಕೀಲ ಲೋಹಿತ್ ಹನುಮಾಪುರ ಹೇಳಿಕೆ ನೀಡಿದ್ದಾರೆ. ‘ಹಲವಾರು ಕೇಸ್​ಗಳು ಬೀಳುತ್ತವೆ. ಪ್ರಯಾಗ್​ ಅವರಿಂದಲೇ ಇನ್ನೂ ಎರಡು-ಮೂರು ಕೇಸ್​ಗಳನ್ನು ಹಾಕಲಾಗುತ್ತದೆ. ಕಾನೂನಿನ ರೀತಿಯಲ್ಲಿ ನಡೆದುಕೊಂಡ ಅಧಿಕಾರಿ ಬಗ್ಗೆ ಪ್ರತಾಪ್​ ಆರೋಪ ಮಾಡಿದ್ದಾರೆ. ಪ್ರತಾಪ್​ ವಿರುದ್ಧ ಕಾನೂನಿನಲ್ಲಿ ಅವಕಾಶ ಇರುವ ಎಲ್ಲವನ್ನೂ ಫೈಲ್​ ಮಾಡಲಾಗುತ್ತದೆ’ ಎಂದು ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ