ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್-ಸುರೇಶ್ ನಡುವೆ ಜಟಾಪಟಿ
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ಜಗದೀಶ್ ಮನೆಯ ಒಬ್ಬರಲ್ಲ ಒಬ್ಬರ ಮೇಲೆ ಜಗಳ ಆಡುತ್ತಲೇ ಇದ್ದಾರೆ. ಮನೆಯ ಸದಸ್ಯರಿಗೆ ಜಗದೀಶ್ ಮೇಲೆ ವಿರಕ್ತಿ ಬಂದಂತಿದೆ. ಯಾರಿಗೂ ಅವರೊಟ್ಟಿಗೆ ಗೆಳೆತನ ಇಷ್ಟವಿದ್ದಂತಿಲ್ಲ.
ಬಿಗ್ಬಾಸ್ ಕನ್ನಡ ಪ್ರಾರಂಭ ಆದಾಗಿನಿಂದಲೂ ಲಾಯರ್ ಜಗದೀಶ್ಗೂ ಮನೆಯ ಸದಸ್ಯರಿಗೂ ಸರಿ ಬರುತ್ತಿಲ್ಲ. ಲಾಯರ್ ಜಗದೀಶ್ ಮನೆಯ ಎಲ್ಲ ಸದಸ್ಯರೊಟ್ಟಿಗೆ ಜಗಳ ಮಾಡಿಕೊಂಡಿದ್ದಾಗಿದೆ. ಜಗದೀಶ್ ಜೊತೆ ಯಾರಿಗೂ ಗೆಳೆತನ ಮಾಡುವುದು ಸಹ ಇಷ್ಟವಿದ್ದಂತಿಲ್ಲ. ಗೋಲ್ಡ್ ಸುರೇಶ್ ಈ ಮೊದಲು ಜಗದೀಶ್ ಜೊತೆ ತುಸು ಆತ್ಮೀಯವಾಗಿದ್ದರು ಈಗ ಅವರೂ ಸಹ ಟೀ ಮಾಡುವ ಸಣ್ಣ ವಿಷಯಕ್ಕೆ ಜಗದೀಶ್ ಜೊತೆ ವಿನಾಕಾರಣ ಜಗಳ ಆಡಿದ್ದಾರೆ. ಜಗದೀಶ್ ಹಾಗೂ ಸುರೇಶ್ ಜಗಳ ಮಾಡಿರುವ ವಿಡಿಯೋ ಇಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos