AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?

ರಾಜೇಶ್ ದುಗ್ಗುಮನೆ
|

Updated on: Nov 11, 2026 | 8:30 AM

Share

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದರ ಸಂದರ್ಭದಲ್ಲಿ ಮಂಜು ಹಾಗೂ ಯಶಸ್ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ಹಾಗೂ ಜಗಳ ನಡೆದಿದೆ. ಈ ಹಿಂದೆ ಕೂಡ ಇವರ ನಡುವೆ ಇಂತಹದ್ದೇ ಕಿರಿಕ್ ಉಂಟಾಗಿದ್ದು, ಪ್ರಸ್ತುತ ಪರಿಸ್ಥಿತಿ ನೋಡಿದರೆ ಆ ಗಲಾಟೆ ಮತ್ತೆ ಮರುಕಳಿಸುವ ಸ್ಪಷ್ಟ ಸೂಚನೆ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಮಂಜು ಹಾಗೂ ಯಶಸ್ ನಡುವೆ ತೀವ್ರ ಸ್ವರೂಪದ ಕಿರಿಕ್ ಉಂಟಾಗಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಟಾಸ್ಕ್ ಒಂದರ ವೇಳೆ ನಾಯಕನ ಕಟ್ ಔಟ್ ಹಾಗೂ ಬಣ್ಣದ ವಿಚಾರವಾಗಿ ಇಬ್ಬರ ನಡುವೆ ಮಾತಿನ ವಾಗ್ವಾದ ಆರಂಭವಾಗಿದೆ. ಇದು ಕ್ರಮೇಣ ತಾರಕಕ್ಕೇರಿ ಪರಸ್ಪರ ಗರಂ ಆಗುವಂತೆ ಮಾಡಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ದೊಡ್ಡ ಮಟ್ಟದ ವಾದ-ವಿವಾದವೇ ನಡೆದಿದೆ.

ಈ ಹಿಂದೆ ಕೂಡ ಬಿಗ್ ಬಾಸ್ ಮನೆಯಲ್ಲಿ ಇದೇ ರೀತಿಯ ಗಲಾಟೆಗಳು ಹಾಗೂ ಮನಸ್ತಾಪಗಳು ನಡೆದಿತ್ತು. ಇದೀಗ ಮತ್ತೆ ಮಂಜು ಮತ್ತು ಯಶಸ್ ನಡುವೆ ಅದೇ ರೀತಿಯ ಕಿರಿಕ್ ಮರುಕಳಿಸಿರುವುದು ಮನೆಯಲ್ಲಿ ಹೊಸ ಬಿರುಗಾಳಿಗೆ ಕಾರಣವಾಗುವ ಮುನ್ಸೂಚನೆ ನೀಡಿದೆ. ಆಟದ ಹುಮ್ಮಸ್ಸಿನಲ್ಲಿ ಶುರುವಾಗುವ ಈ ರೀತಿಯ ಕಿರಿಕ್​ಗಳು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಈ ಜಗಳದ ವಿಚಾರವಾಗಿ ಯಾವ ಚರ್ಚೆ ನಡೆಯಲಿದೆ ಎಂಬ ಕುತೂಹಲವೂ ವೀಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More