ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್

Updated on: Dec 11, 2024 | 4:42 PM

Bigg Boss Kannada: ರಜತ್​ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಬಿಗ್​ಬಾಸ್ ಮನೆಯ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ರಜತ್​ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಟವೊಂದಕ್ಕೆ ರಜತ್ ಉಸ್ತುವಾರಿ ಆಗಿದ್ದು ಉಸ್ತುವಾರಿ ಆಗಿ ಸರಿಯಾಗಿ ಆಟ ಆಡಿಸಿಲ್ಲ ಎಂದು ರಜತ್ ಹಾಗೂ ಮಂಜು ಸಿಟ್ಟಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More