‘ಬಿಗ್ ಬಾಸ್ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ
Kichcha Sudeep | Spoorthi Gowda: ಅನೇಕ ಪ್ರಶ್ನೆಗಳಿಗೆ ಸ್ಫೂರ್ತಿ ಗೌಡ ಉತ್ತರ ನೀಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ನಟಿ ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ಫೂರ್ತಿ ಪಯಣ ಎರಡೇ ವಾರಕ್ಕೆ ಮುಗಿದಿದೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋನಿಂದ ಎಲಿಮಿನೇಟ್ ಆಗಿರುವ ಅವರು ಮೊದಲ ಬಾರಿಗೆ ‘ಟಿವಿ9 ಕನ್ನಡ’ಕ್ಕೆ ಸಂದರ್ಶನ ನೀಡಿದ್ದಾರೆ. ದೊಡ್ಮನೆಯೊಳಗೆ ಯಾರ ವರ್ತನೆ ಯಾವ ರೀತಿ ಇತ್ತು? ನಿಜವಾಗಿ ಅಲ್ಲಿ ಏನೆಲ್ಲ ನಡೆಯಿತು? ತಾವು ಇಷ್ಟು ಬೇಗ ಔಟ್ ಆಗಲು ಕಾರಣ ಏನು? ಈ ಎಲ್ಲ ಪ್ರಶ್ನೆಗಳಿಗೆ ಸ್ಫೂರ್ತಿ ಗೌಡ ಉತ್ತರ ನೀಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈಗ 12 ಜನರ ನಡುವೆ ಪೈಪೋಟಿ ಮುಂದುವರಿದಿದೆ.