ರಜತ್ಗೆ ಮಂಜಣ್ಣನ ಮೇಲೆ ಎಲ್ಲಿಲ್ಲದ ಪ್ರೀತಿ, ಕೊಟ್ಟೇ ಬಿಟ್ಟ ಮುತ್ತು
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಉಗ್ರಂ ಮಂಜು ವಿವಿಧ ವೇಷಗಳನ್ನು ಹಾಕಿಕೊಂಡು ಸಖತ್ ರಂಜಿಸುತ್ತಿದ್ದಾರೆ. ಕಳೆದ ವಾರ ಮಹಾರಾಜನಂತೆ ವೇಷ ಧರಿಸಿ ರಂಜಿಸಿದ್ದ ಮಂಜು ಈಗ ಸೆಲೆಬ್ರಿಟಿ ಆಗಿದ್ದಾರೆ. ಮಂಜು ಅವರ ಅಭಿಮಾನಿಯಾಗಿ ರಜತ್, ಮಂಜುಗೆ ಮುತ್ತು ಕೊಟ್ಟಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಉಗ್ರಂ ಮಂಜು ಹಠಾತ್ತನೆ ಸೆಲೆಬ್ರಿಟಿ ಆಗಿದ್ದಾರೆ. ಮಂಜಣ್ಣನ ಜೊತೆ ಸೆಲ್ಫಿ ತೆಗೆದುಕೊಳ್ಳಲು, ಅವರೊಂದಿಗೆ ಮಾತನಾಡಲು ಸ್ಪರ್ಧಿಗಳು ಸಾಲುಗಟ್ಟುತ್ತಿದ್ದಾರೆ. ರಜತ್ ಅಂತೂ ಉಗ್ರಂ ಮಂಜು ಅವರ ದೊಡ್ಡ ಫ್ಯಾನ್ ಆಗಿಬಿಟ್ಟಿದ್ದಾರೆ. ಮಂಜು ಜೊತೆ ಸೆಲ್ಫಿ ತೆಗೆದುಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಬೇಡ ಎಂದರೂ ಮಂಜು ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಕಳೆದ ವಾರ ಮಹಾರಾಜನಾಗಿ ಅದ್ಭುತವಾಗಿ ಎಂಟರ್ಟೈನ್ ಮಾಡಿದ್ದ ಉಗ್ರಂ ಮಂಜು ಈ ವಾರ ಸೆಲೆಬ್ರಿಟಿ ಆಗಿದ್ದಾರೆ. ಮನೆಯ ಸದಸ್ಯರನ್ನು ರಂಜಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ