ವಿನಯ್​ಗೆ ಧನ್ಯವಾದ ಹೇಳಿದ ಕಾರ್ತಿಕ್ ಮತ್ತು ಸಂಗೀತಾ

|

Updated on: Jan 25, 2024 | 3:35 PM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ತಾವು ಜೀವಿಸದ ಕ್ಷಣಗಳ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ ಸದಸ್ಯರು. ಈ ವೇಳೆ ಕಾರ್ತಿಕ್ ಹಾಗೂ ಸಂಗೀತಾ, ವಿನಯ್​ಗೆ ಧನ್ಯವಾದ ಹೇಳಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಮುಗಿಯುವ ಹಂತಕ್ಕೆ ಬಂದಿದೆ. ಈ ವಾರಾಂತ್ಯಕ್ಕೆ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಈಗ ಮನೆಯಲ್ಲಿರುವ ಆರು ಜನರಲ್ಲಿ ಒಬ್ಬರು ವಿಜೇತರು ಎನಿಸಿಕೊಳ್ಳಲಿದ್ದಾರೆ. ಮನೆಯಲ್ಲಿರುವ ಸದಸ್ಯರಿಗೆ ಬಿಗ್​ಬಾಸ್ ದಿನಕ್ಕೊಂದು ಹೊಸ ಚಟುವಟಿಕೆಗಳನ್ನು ನೀಡುತ್ತಿದ್ದು, ಅವರ ಬಂಧವನ್ನು ಗಟ್ಟಿಗೊಳಿಸುತ್ತಿದ್ದಾರೆ. ಇದೀಗ ‘ವಾಲ್ ಆಫ್ ಮೆಮೊರಿ’ಯನ್ನು ಬಿಗ್​ಬಾಸ್ ಮನೆಯಲ್ಲಿ ಸೃಷ್ಠಿಸಲಾಗಿದ್ದು, ಮನೆಯ ಸದಸ್ಯರು ಮನೆಯಲ್ಲಿ ತಾವು ಕಳೆದ ಕ್ಷಣಗಳ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಕಾರ್ತಿಕ್ ಹಾಗೂ ಸಂಗೀತಾ, ವಿನಯ್​ಗೆ ಧನ್ಯವಾದ ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ