‘ವಿನಯ್ ಸ್ವೀಟ್ ವ್ಯಕ್ತಿ, ಸಂಗೀತಾ ಬಹಳ ಒಳ್ಳೆಯವರು’ ಬಿಗ್ಬಾಸ್ ಮನೆಯಲ್ಲಿ ಏನಾಗುತ್ತಿದೆ?
Bigg Boss Kannada: ಬಿಗ್ಬಾಸ್ ಕನ್ನಡ ಮನೆಯ ಬದ್ಧ ವೈರಿಗಳಾದ ಸಂಗೀತಾ ಹಾಗೂ ವಿನಯ್ ಪರಸ್ಪರರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಕಾರಣವೇನು?
ಬಿಗ್ಬಾಸ್ (BiggBoss) ಮನೆಯ ಬದ್ಧ ವೈರಿಗಳೆಂದರೆ ವಿನಯ್ ಮತ್ತು ಸಂಗೀತಾ. ಶೋ ಪ್ರಾರಂಭವಾದ ಮೊದಲ ವಾರದಿಂದಲೂ ಈ ಇಬ್ಬರ ನಡುವೆ ವೈರತ್ವ ನಡೆಯುತ್ತಲೇ ಬಂದಿದೆ. ಇಷ್ಟು ತೀಕ್ಷ್ಣವಾದ ದ್ವೇಷ, ವೈರತ್ವ ಬಿಗ್ಬಾಸ್ ಇತಿಹಾಸದಲ್ಲಿಯೇ ಇರಲಿಲ್ಲವೇನೋ. ಇಬ್ಬರೂ ಸಹ ನಾವು ವೈರಿಗಳು ಎಂಬುದನ್ನು ನೇರವಾಗಿ ಘೋಷಿಸಿದ್ದು, ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಮನೆಯಲ್ಲಿ ಕಿತ್ತಾಡುತ್ತಲೆ ಇರುತ್ತಾರೆ. ಆದರೆ ಭಾನುವಾರದ ಎಪಿಸೋಡ್ನಲ್ಲಿ ಒಂದು ಅದ್ಭುತ ನಡೆದಂತಿದೆ. ಇಬ್ಬರೂ ಸಹ ಪರಸ್ಪರರನ್ನು ಹೊಗಳಿದ್ದಾರೆ ಮಾತ್ರವಲ್ಲದೆ, ಪರಸ್ಪರ ಆಲಿಂಗಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ