ಚಿತ್ರದುರ್ಗ: ಚಿನ್ನದ ನಾಣ್ಯ ಸಿಗುತ್ತವೆ ಎಂಬ ವದಂತಿ;ರಾಷ್ಟ್ರೀಯ ಹೆದ್ದಾರಿ ಬಳಿ ಶೋಧ ಕಾರ್ಯದಲ್ಲಿ ತೊಡಗಿದ‌ ಜನ

ಚಿತ್ರದುರ್ಗ: ಚಿನ್ನದ ನಾಣ್ಯ ಸಿಗುತ್ತವೆ ಎಂಬ ವದಂತಿ;ರಾಷ್ಟ್ರೀಯ ಹೆದ್ದಾರಿ ಬಳಿ ಶೋಧ ಕಾರ್ಯದಲ್ಲಿ ತೊಡಗಿದ‌ ಜನ

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 24, 2023 | 4:45 PM

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು(Molakalmuru) ತಾಲೂಕಿನ ಕೆಳಗಳಹಟ್ಟಿ ಗ್ರಾಮದ ಬಳಿ ಚಿನ್ನದ ನಾಣ್ಯ ಸಿಗುತ್ತದೆ ಎಂಬ ವದಂತಿ ಹರಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಳಿ ಬೆಳಗ್ಗೆಯಿಂದ ನೂರಾರು ಜನ ಜಮಾಯಿಸಿ ಶೋಧ ಕಾರ್ಯ ಆರಂಭಿಸಿದ ಘಟನೆ ನಡೆದಿದೆ.

ಚಿತ್ರದುರ್ಗ, ಡಿ.24: ಜನ ಮರಳೋ, ಜಾತ್ರೆ ಮರಳೋ ಎಂಬ ಗಾದೆ ಮಾತಿನಂತೆ ನಮ್ಮ ಜನ ಯಾರು ಏನೇ ಹೇಳಿದರೂ ಸಲೀಸಾಗಿ ನಂಬಿ ಬಿಡುತ್ತಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು(Molakalmuru) ತಾಲೂಕಿನ ಕೆಳಗಳಹಟ್ಟಿ ಗ್ರಾಮದ ಬಳಿ ಚಿನ್ನದ ನಾಣ್ಯ ಸಿಗುತ್ತದೆ ಎಂಬ ವದಂತಿ ಹರಡಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಳಿ ಬೆಳಗ್ಗೆಯಿಂದ ನೂರಾರು ಜನ ಜಮಾಯಿಸಿ ಶೋಧ ಕಾರ್ಯ ಆರಂಭಿಸಿದ ಘಟನೆ ನಡೆದಿದೆ. ನಕಲಿ ಚಿನ್ನದ ಮಾದರಿಯಲ್ಲಿರುವ ಕೆಲ ತುಣುಕು ಪತ್ತೆಯಾದ ಹಿನ್ನಲೆ ಇಲ್ಲಿ ಚಿನ್ನ ಸಿಗುತ್ತಿದೆ ಎಂಬ ವದಂತಿ ನಂಬಿದ ಜನರು ಶೋಧ‌ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ