AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ಶೈನ್​ ಶೆಟ್ಟಿ, ಶುಭಾ ಪೂಂಜಾ; ಎದುರಾಯ್ತು ದೊಡ್ಡ ಟ್ವಿಸ್ಟ್​

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ಶೈನ್​ ಶೆಟ್ಟಿ, ಶುಭಾ ಪೂಂಜಾ; ಎದುರಾಯ್ತು ದೊಡ್ಡ ಟ್ವಿಸ್ಟ್​

ಮದನ್​ ಕುಮಾರ್​
|

Updated on: Dec 24, 2023 | 9:38 AM

Share

ಬಿಗ್​ ಬಾಸ್​ ಮಾಜಿ ಸ್ಪರ್ಧಿಗಳಾದ ಶೈನ್​ ಶೆಟ್ಟಿ ಮತ್ತು ಶುಭಾ ಪೂಂಜಾ ಅವರು ಈಗ ಮತ್ತೆ ದೊಡ್ಮನೆಗೆ ಆಗಮಿಸಿದ್ದಾರೆ. ಅವರ ಎಂಟ್ರಿಯಿಂದಾಗಿ ಮನೆಯಲ್ಲಿ ಹೊಸ ವಾತಾವರಣ ನಿರ್ಮಾಣ ಆಗಿದೆ. ಈ ವಾರ ಎರಡು ಎಲಿಮಿನೇಷನ್​ ಇದೆ ಎಂಬ ಟ್ವಿಸ್ಟ್​ ಕೂಡ ನೀಡಲಾಗಿದೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋ ಈಗ ರೋಚಕ ಹಂತವನ್ನು ತಲುಪಿದೆ. ಕಿಚ್ಚ ಸುದೀಪ್​ ಅವರು ಕೆಸಿಸಿ ಪಂದ್ಯಗಳಲ್ಲಿ ಬ್ಯುಸಿ ಇರುವ ಕಾರಣದಿಂದ ಈ ವಾರ ಬಿಗ್​ ಬಾಸ್​ ಶೋ ನಿರೂಪಣೆ ಮಾಡಲು ಸಾಧ್ಯವಾಗಿಲ್ಲ. ಅವರ ಬದಲು ಹಿರಿಯ ನಟಿ ಶ್ರುತಿ ಬಂದು ಶನಿವಾರದ (ಡಿ.23) ಎಪಿಸೋಡ್​ ನಡೆಸಿಕೊಟ್ಟರು. ಭಾನುವಾರದ (ಡಿ.24) ಸಂಚಿಕೆಗೆ ಶೈನ್​ ಶೆಟ್ಟಿ (Shine Shetty) ಮತ್ತು ಶುಭಾ ಪೂಂಜಾ (Shubha Poonja) ಅವರು ಆಗಮಿಸಿದ್ದಾರೆ. ಅವರ ಎಂಟ್ರಿಯಿಂದಾಗಿ ಮನೆಯಲ್ಲಿ ಹೊಸ ವಾತಾವರಣ ನಿರ್ಮಾಣ ಆಗಿದೆ. ಈ ವಾರ ಎರಡು ಎಲಿಮಿನೇಷನ್​ ಇದೆ ಎಂಬ ಟ್ವಿಸ್ಟ್​ ಕೂಡ ನೀಡಲಾಗಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಸಂಚಿಕೆ ಡಿ.24ರಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More