ಬಿಗ್ ಬಾಸ್ ಮನೆಗೆ ಬಂದ ಮಾಜಿ ಸ್ಪರ್ಧಿಗಳು; ನಡೀತಿದೆ ದೊಡ್ಡ ಪಾರ್ಟಿ
Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಈ ವಾರ ದೊಡ್ಡ ಮಟ್ಟದಲ್ಲಿ ಪಾರ್ಟಿ ನಡೆಯಲು ಪ್ಲ್ಯಾನ್ ನಡೆಸಲಾಗಿದೆ. ಇದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೂರ ಬರುತ್ತಿದ್ದಾರೆ. ಅಸಲಿಗೆ ಏನಿದು ಪಾರ್ಟಿ? ಇದರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಪಾರ್ಟಿ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ, ರಜತ್, ತ್ರಿವಿಕ್ರಂ ಆಗಮಿಸಿದ್ದಾರೆ. ಇದರಿಂದ ಈ ವಾರದ ಆಟ ಮಜ ಮತ್ತಷ್ಟು ರಂಗಾಗಿರಲಿದೆ. ಯಾವ ರೀತಿಯಲ್ಲಿ ಈ ವಾರ ಇರುತ್ತದೆ ಎಂಬ ಕುತೂಹಲ ಮೂಡಿದೆ. ಅತಿಥಿಗಳು ಒಂದು ವಾರ ಇರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
