ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ಜಗದೀಶ್. ನೆಗಟಿವ್ ಆಗಲಿ ಅಥವಾ ಪೊಸಿಟಿವ್ ಆಗಲಿ ತಾವು ಚರ್ಚೆ ಆಗಬೇಕು ಎಂಬುದು ಅವರ ಉದ್ದೇಶ. ಇದಕ್ಕಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುದೀಪ್ ಅವರು ಈ ವಿಚಾರದಲ್ಲಿ ಕ್ಲಾಸ್ ತೆಗೆದುಕೊಳ್ಳಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ‘ಕಿಚ್ಚನ ಪಂಚಾಯ್ತಿ’ ಇಂದು (ಸೆಪ್ಟೆಂಬರ್ 5) ನಡೆಯಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ. ಮೊದಲ ವಾರವೇ ಬಿಗ್ ಬಾಸ್ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈ ಮಧ್ಯೆ ಜಗದೀಶ್, ಯಮುನಾ, ಹಂಸ, ಭವ್ಯಾ, ಗೌತಮಿ, ಚೈತ್ರಾ, ಶಿಶಿರ್, ಮೋಕ್ಷಿತಾ ಹಾಗೂ ಮಾನಸ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.