ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ; ಶಿಶಿರ್-ಯಮುನಾ ಮಧ್ಯೆ ಕಿತ್ತಾಟ
ದೊಡ್ಮನೆಯೊಳಗೆ ಎರಡು ಭಾಗ ಇದೆ. ಸ್ವರ್ಗದಲ್ಲಿ ಕೆಲವರು ಇದ್ದಾರೆ. ನರಕದಲ್ಲಿ ಇನ್ನುಳಿದವರು ಇದ್ದಾರೆ. ಮನೆಯ ಒಂದಷ್ಟು ಕೆಲಸವನ್ನು ನರಕವಾಸಿಗಳಿಂದ ಮಾಡಿಸಲಾಗುತ್ತಿದೆ. ಈ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಬೆಂಕಿಯನ್ನೇ ಹತ್ತಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಈಗಾಗಲೇ ಚೈತ್ರಾ ಕುಂದಾಪುರ್ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈಗ ಟಾಸ್ಕ್ ಮೂಲಕ ಎರಡನೇ ಹಂತದ ಪ್ರಕ್ರಿಯೆ ಆರಂಭಿಸಲಾಗಿದೆ. ಸ್ವರ್ಗದಲ್ಲಿರೋ ಯಮುನಾ ಶ್ರೀನಿಧಿ ಹಾಗೂ ನರಕದಲ್ಲಿರೋ ಶಿಶಿರ್ ಮಧ್ಯೆ ಕಿತ್ತಾಟ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 01, 2024 08:51 AM