ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?

|

Updated on: Oct 19, 2024 | 7:25 PM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಕಳೆದ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಇಂದು ಸುದೀಪ್ ವಾರದ ಪಂಚಾಯಿತಿ ನಡೆಸುತ್ತಿದ್ದು, ಮನೆಯ ಎಲ್ಲ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11ರ ವೀಕೆಂಡ್ ಪಂಚಾಯಿತಿ ಇಂದು (ಅಕ್ಟೋಬರ್ 19) ನಡೆಯಲಿದೆ. ಪ್ರತಿ ಬಾರಿಯಂತೆ ಕಿಚ್ಚ ಸುದೀಪ್ ವಾರದ ಪಮಚಾಯಿತಿ ನಡೆಸಿಕೊಡಲಿದ್ದಾರೆ. ಈ ವಾರ ಅವರಿಗೆ ತುಸು ಹೆಚ್ಚೇ ಕೆಲಸ ಇದೆ. ಈ ವಾರ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಮನೆಯಲ್ಲಿ ದೊಡ್ಡ ಜಗಳವೇ ನಡೆದು ಇಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಸುದೀಪ್, ಮನೆಯ ಇತರ ಸದಸ್ಯರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಬ್ಬರು ಮಾಡಿದ್ದು ತಪ್ಪಾದರೆ ನೀವು ಮಾಡಿದ್ದೇನು? ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಮಾತ್ರವಲ್ಲದೆ ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮಾನಸಾಗಂತೂ ತುಸು ಗಟ್ಟಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈಗ ಬಿಡುಗಡೆ ಆಗಿರುವ ಪ್ರೋಮೋ ನೋಡಿದರೆ ಎಲ್ಲರನ್ನೂ ಒಟ್ಟಿಗೆ ಎಲಿಮಿನೇಟ್ ಮಾಡಿಬಿಡುತ್ತಾರಾ ಎಂಬ ಅನುಮಾನವೂ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ