AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಹೋಗೋದು ಒಬ್ಬರಲ್ಲ, ಇಬ್ಬರು? ಬಿಗ್ ಬಾಸ್​ನಲ್ಲಿ ದೊಡ್ಡ ಟ್ವಿಸ್ಟ್?

ಈ ವಾರ ಹೋಗೋದು ಒಬ್ಬರಲ್ಲ, ಇಬ್ಬರು? ಬಿಗ್ ಬಾಸ್​ನಲ್ಲಿ ದೊಡ್ಡ ಟ್ವಿಸ್ಟ್?

ರಾಜೇಶ್ ದುಗ್ಗುಮನೆ
|

Updated on: Oct 04, 2025 | 9:50 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇಡಲಾಗುತ್ತಿದೆ. ಊಹಿಸದ್ದು ನಡೆಯದೇ ಇರುವಂತೆ ಮಾಡುವುದು ಈ ಬಾರಿಯ ಥೀಮ್. ಅದಕ್ಕೆ ತಕ್ಕಂತೆ ಮಾಡಲಾಗುತ್ತಿದೆ. ಈ ಬಾರಿ ಒಬ್ಬರಲ್ಲ ಇಬ್ಬರು ಹೊರ ಹೋಗೋದು ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಜನರು ಊಹಿಸದೇ ಇರುವುದು ನಡೆಯುವಂತೆ ನೋಡಿಕೊಳ್ಳುವುದು ಬಿಗ್ ಬಾಸ್ ಆಶಯ. ಈ ವಾರ ಒಬ್ಬರಲ್ಲ, ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಜೋಡಿ ನಾಮಿನೇಷನ್. ಈ ಬಾರಿ ಒಂಟಿ ಹಾಗೂ ಜಂಟಿ ಎಂದು ವಿಂಗಡಿಸಲಾಗಿದೆ. ಒಂಟಿಗಳ ಪೈಕಿ ಧನುಷ್​ ಹಾಗೂ ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಜಂಟಿಗಳ ಪೈಕಿ ಅಭಿಷೇಕ್​-ಅಶ್ವಿನಿ, ಗಿಲ್ಲಿ ನಟ-ಕಾವ್ಯಾ, ಅಮಿತ್ ಹಾಗೂ ಕರಿ ಬಸಪ್ಪ ನಾಮಿನೇಟ್ ಆಗಿದ್ದಾರೆ. ಜೋಡಿಗಳ ಪೈಕಿ ಹೋದರೆ ಇಬ್ಬರೂ ಎಲಿಮಿನೇಟ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More