ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?

Updated on: Dec 29, 2025 | 4:34 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸೋಮವಾರ (ಡಿಸೆಂಬರ್ 29) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಡಿಸೆಂಬರ್ 29ರ ಸಂಚಿಕೆಯ ಪ್ರೋಮೋ ಇಲ್ಲಿದೆ..

ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಈಗ ಕೆಲವೇ ಮಂದಿ ಇದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಪೈಪೋಟಿ ಜೋರಾಗಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸೋಮವಾರ (ಡಿಸೆಂಬರ್ 29) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಗಿಲ್ಲಿ ಅವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನಾಮಿನೇಷನ್ ವೇಳೆ ಪ್ರತಿ ಬಾರಿಯೂ ಕಿರಿಕ್ ಇದ್ದೇ ಇರುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕಾವ್ಯಾ ಪರವಾಗಿ ಗಿಲ್ಲಿ ನಿಂತಿದ್ದಕ್ಕೆ ಅಶ್ವಿನಿ ಗೌಡ ಅವರು ಗರಂ ಆಗಿದ್ದಾರೆ. ಈ ವಾರ ಯಾರು ಔಟ್ ಆಗುತ್ತಾರೆ? ಫಿನಾಲೆ ತನಕ ಯಾರು ಬರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಧನುಶ್, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಕಾವ್ಯಾ ಶೈವ, ಗಿಲ್ಲಿ ನಟ (Gilli Nata) ಅವರ ನಡುವೆ ಪೈಪೋಟಿ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.