ನಾಮಿನೇಷನ್​ನಿಂದ ಬಚಾವ್ ಆಗಲು ರಕ್ಷಿತಾ ಜೊತೆ ಜಗಳಕ್ಕೆ ಇಳಿದ ರಾಶಿಕಾ

Updated on: Nov 12, 2025 | 8:55 AM

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ತುಂಬಾನೇ ದೊಡ್ಡದು. ಇದರಲ್ಲಿ ನಾಮಿನೇಟ್ ಆಗಿ ಎಲಿಮಿನೇಟ್ ಆದರೆ ಎಂಬ ಭಯ ಎಲ್ಲರಿಗೂ ಇರುತ್ತದೆ. ಈ ವಿಚಾರದಲ್ಲಿ ರಾಶಿಕಾ ಅವರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಅವರು ರಕ್ಷಿತಾ ವಿರುದ್ಧ ಸಿಟ್ಟಾಗಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಾಶಿಕಾ ಹಾಗೂ ರಕ್ಷಿತಾ ನಡುವೆ ಮಾತಿನ ಫೈಟ್ ನಡೆದಿದೆ. ಈ ರೀತಿ ಆಗಲು ಒಂದು ಕಾರಣವೂ ಇದೆ. ಈ ಬಾರಿ ರಾಶಿಕಾ ಹೆಸರು ನಾಮಿನೇಷನ್​ನಲ್ಲಿ ಇದೆ. ಅವರ ತಂಡ ಗೆದ್ದಿರುವುದರಿಂದ ನಾಮಿನೇಷ್​ನಿಂದ ಬಚಾವ್ ಆಗಲು ಒಂದು ಅವಕಾಶ ಇತ್ತು. ಈ ಅವಕಾಶವನ್ನು ನೀಡಲು ರಕ್ಷಿತಾ ಒಪ್ಪಿಲ್ಲ. ಇದಕ್ಕೆ ಕಿತ್ತಾಟ ನಡೆದಿದೆ. ರಾಶಿಕಾ ಸಿಟ್ಟಿನಿಂದ ಕೂಗಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 12, 2025 08:54 AM