ಮೂರು ಜಂಟಿ, ನಾಲ್ಕು ಒಂಟಿಗಳು ನಾಮಿನೇಟ್; ಯಾರು ಔಟ್?

Updated on: Oct 11, 2025 | 10:08 AM

ಬಿಗ್ ಬಾಸ್ ಆಟ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದೆ. ಈ ಆಟದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮೂರು ಜಂಟಿಗಳು ನಾಮಿನೇಟ್ ಆದರೆ, ನಾಲ್ಕು ಒಂಟಿಗಳು ನಾಮಿನೇಟ್ ಆಗಿದ್ದಾರೆ. ಈ ಮೂಲಕ 10 ಮಂದಿ ನಾಮಿನೇಟ್ ಆದಂತೆ ಆಗಿದೆ. ಹೊರ ಹೋಗೋದು ಯಾರು ಎಂಬ ಪ್ರಶ್ನೆ ಮೂಡಿದೆ.  

‘ಬಿಗ್ ಬಾಸ್ ಕನ್ನಡ ಸೀಸನ್ 12’ ಎರಡನೇ ವಾರಕ್ಕೆ ಕಾಲಿಟ್ಟಿದೆ. ವೀಕೆಂಡ್​ ಬಂದಿದ್ದು, ಸುದೀಪ್ ಅವರು ಎಪಿಸೋಡ್ ನಡೆಸಿಕೊಡಲಿದ್ದಾರೆ. ಈ ವಾರ ಒಬ್ಬರು ಔಟ್ ಆಗಲಿದ್ದಾರೆ. ಮಂಜು ಭಾಷಿಣಿ-ರಿಶಿಕಾ, ಮಾಳು-ಸ್ಪಂದನಾ ಸೋಮಣ್ಣ, ಅಭಿ-ಅಶ್ವಿನಿ ಜಂಟಿಗಳಲ್ಲಿ ನಾಮಿನೇಟ್ ಆಗಿದ್ದಾರೆ. ಜಾನ್ವಿ, ರಕ್ಷಿತಾ ಶೆಟ್ಟಿ, ಧನು, ಅಶ್ವಿನಿ ಗೌಡ ಒಂಟಿಗಳಲ್ಲಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರು ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.