ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಏನೋ ನಡೆಯುತ್ತಿದೆ. ಎಲ್ಲರೂ ಮಲಗಿದ ಇವರಿಬ್ಬರೇ ಪ್ರೀತಿ-ಪ್ರೇಮದ ವಿಷಯ ಮಾತನಾಡುತ್ತಿರುತ್ತಾರೆ. ಇದೀಗ ಈ ಸೀಸನ್ನ ಕೊನೆಯ ಪಂಚಾಯಿತಿಯಲ್ಲಿ ಸುದೀಪ್ ಎಲ್ಲರೆದುರು ಭವ್ಯಾ-ತ್ರಿವಿಕ್ರಮ್ ಅವರ ಪ್ರೀತಿಯ ವಿಷಯ ಎತ್ತಿದ್ದಾರೆ.
ಪ್ರತಿ ಬಿಗ್ಬಾಸ್ ಸೀಸನ್ನಲ್ಲೂ ಒಂದಲ್ಲ ಒಂದು ಜೋಡಿ ಇದ್ದೇ ಇರುತ್ತದೆ. ಈ ಬಾರಿ ಅದು ಭವ್ಯಾ ಮತ್ತು ತ್ರಿವಿಕ್ರಮ್. ಹಲವು ಜೋಡಿಗಳು ಬಿಗ್ಬಾಸ್ ಮನೆಯಲ್ಲಿಯೇ ಆಗಿವೆ. ಆ ಜೋಡಿಗಳು ಹೊರ ಹೋಗಿ ಮದುವೆಯೂ ಆಗಿದ್ದಿದೆ. ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ನಡುವೆ ಅಂಥಹದ್ದೊಂದು ಬಂಧ ಏರ್ಪಟ್ಟಿದೆ. ಕೆಲ ದಿನಗಳ ಹಿಂದೆ ಭವ್ಯಾ ಮತ್ತು ತ್ರಿವಿಕ್ರಮ್ ಅವರು ಎಲ್ಲರೂ ಮಲಗಿದ ಮೇಲೆ ಪ್ರೀತಿ-ಪ್ರೇಮದ ವಿಷಯ ಮಾತನಾಡಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಗೋಲ್ಡ್ ಸುರೇಶ್ ಇದೇ ವಿಷಯ ಕೇಳಿದ್ದರು. ಇದೀಗ ಈ ಸೀಸನ್ನ ಕೊನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಸಹ ಇದೇ ವಿಷಯ ಪ್ರಶ್ನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ