ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್

|

Updated on: Oct 19, 2024 | 2:27 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಕಳೆದ ವಾರ ಹಲವು ಘಟನೆಗಳು ಘಟಿಸಿವೆ. ಮನೆ ಮಂದಿಯಿಂದ ಭಾರಿ ಜಗಳದಲ್ಲಿ ಪಾಲ್ಗೊಂಡಿದ್ದು, ಬಿಗ್​ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರುಗಳು ಹೊರಗೆ ಹಾಕಲಾಗಿದೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿದಿನ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ವಾರವಂತೂ ಹಲವು ಘಟನೆಗಳು ಬಿಗ್​ಬಾಸ್ ಮನೆಯಲ್ಲಿ ನಡೆದಿವೆ. ಹೊರಗೆ ಸುದೀಪ್, ಬಿಗ್​ಬಾಸ್​ಗೆ ವಿದಾಯ ಹೇಳಿದ್ದು ಪ್ರಮುಖ ಸುದ್ದಿಯಾದರೆ ಒಳಗೆ ಲಾಯರ್ ಜಗದೀಶ್ ಮತ್ತು ರಂಜಿತ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಇನ್ನೂ ದೊಡ್ಡ ಸುದ್ದಿಯಾಗಿದೆ. ಇದೀಗ ಮತ್ತೊಂದು ಶನಿವಾರ ಬಂದಿದೆ. ವೀಕೆಂಡ್ ಪಂಚಾಯಿತಿಗೆ ಸುದೀಪ್ ಬಂದಿದ್ದಾರೆ. ವೀಕೆಂಡ್​ನ ಮೊದಲ ಪ್ರೋಮೋನಲ್ಲಿ ಸುದೀಪ್, ಬಿಗ್​ಬಾಸ್​ನಿಂದ ತಪ್ಪಾಗಿದೆಯೇ? ಬಿಗ್​ಬಾಸ್ ತಪ್ಪು ನಿರ್ಣಯ ತೆಗೆದುಕೊಂಡಿದ್ದಾರೆಯೇ? ಎಂದಿದ್ದು, ಬಿಗ್​ಬಾಸ್ ತೆಗೆದುಕೊಂಡಿರುವ ನಿರ್ಣಯವನ್ನು ವಿಮರ್ಶೆಗೆ ಒಳಪಡಿಸುವ ಸೂಚನೆ ನೀಡಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 19, 2024 02:21 PM