ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?

Updated on: Jan 22, 2025 | 3:27 PM

Bigg Boss Kannada Season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಬಿಗ್​ಬಾಸ್ ಮನೆಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಬರುತ್ತಲೇ ಇದ್ದಾರೆ. ಇದೀಗ ಡಿವೋರ್ಸ್ ವಕೀಲೆಯೊಬ್ಬರು ಬಿಗ್​ಬಾಸ್ ಮನೆಗೆ ಬಂದಿದ್ದಾರೆ. ಈ ಡಿವೋರ್ಸ್ ವಕೀಲೆ ವ್ಯಕ್ತಿಗಳ ಬೇರ್ಪಡಿಸುವ ವಕೀಲೆ ಅಲ್ಲ ಬದಲಿಗೆ ಜನರನ್ನು ಸೇರಿಸುವ ವಕೀಲೆ.

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರ ನಡೆಯುತ್ತಿದೆ. ಕಡೆಯ ವಾರ ಹೆಚ್ಚಿನ ಗಲಾಟೆ, ಟಾಸ್ಕ್​ಗಳ ಜಂಜಾಟ ಇಲ್ಲ. ಬದಲಿಗೆ ಒಬ್ಬರ ಹಿಂದೊಬ್ಬರು ಅತಿಥಿಗಳು ಮನೆಗೆ ಬರುತ್ತಲೇ ಇದ್ದಾರೆ. ಮನೆಯ ಸದಸ್ಯರು ಸಹ ಬಂದ ಅತಿಥಿಗಳೊಟ್ಟಿಗೆ ಹರಟೆ ಹೊಡೆಯುತ್ತಾ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಿಗ್​ಬಾಸ್​ನ ಇಷ್ಟು ದಿನದ ಪಯಣದಲ್ಲಿ ಸ್ಪರ್ಧಿಗಳು ಒಬ್ಬರ ಬಗ್ಗೆ ಇನ್ನೊಬ್ಬರು ದ್ವೇಷ, ಸಿಟ್ಟುಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ಬಿಗ್​ಬಾಸ್ ಮನೆಗೆ ಡೈವರ್ಸ್ ಲಾಯರ್ ಒಬ್ಬರ ಆಗಮನ ಆಗಿದೆ. ಆದರೆ ಇವರು ವ್ಯಕ್ತಿಗಳನ್ನು ಬೇರ್ಪಡಿಸುವ ವಕೀಲರಲ್ಲ ಬದಲಿಗೆ ಮನಸ್ಸುಗಳನ್ನು ಜೋಡಿಸುವ ವಕೀಲರು. ಸಿಟ್ಟು ಮಾಡಿಕೊಂಡು ಜಗಳ ಆಡಿದ್ದ ರಜತ್-ಮಂಜು, ತ್ರಿವಿಕ್ರಮ್-ಮೋಕ್ಷಿತಾ ನಡುವೆ ಸಂಧಾನ ಮಾಡಿದ್ದಾರೆ. ಈ ಸಂಧಾನ ಕಾರ್ಯ ಯಶಸ್ವಿ ಆಯಿತೆ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More