ಗುಳ್ಳೆ ನರಿ ಕೈಯಲ್ಲೇ ಗುಳ್ಳೆ ನರಿ ಹುಡುಕೋ ಕೆಲಸ; ಸಂಕಷ್ಟದಲ್ಲಿ ಯಶಸ್

Updated on: Nov 26, 2026 | 8:32 AM

ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಹುಡುಕುವ ಕೆಲಸ ಜೊರಾಗಿದೆ. ಸ್ಪರ್ಧಿಗಳ ಮಧ್ಯೆ ಇರೋ ಆ ಗುಳ್ಳೆನರಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದನ್ನು ಹುಡುಕುವ ಕೆಲಸ ಜೋರಾಗಿ ಸಾಗುತ್ತಾ ಇದೆ. ಹೀಗಿರುವಾಗಲೇ ಯಶಸ್​ಗೆ ಸಂಕಷ್ಟ ಎದುರಾಗಿದೆ. ಗುಳ್ಳೆ ನರಿಯನ್ನು ಹುಡುಕುವ ಕೆಲಸ ಅವರಿಗೆ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಯಾರು? ಕಾಗೆ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯಶಸ್ ಅವರು ಗುಳ್ಳೆ ನರಿ ಆದರೆ, ತಾಂಡವ್ ಕಾಗೆ. ಈಗ ಯಶಸ್ ಅವರ ಹೆಗಲಿಗೆ ಮನೆಯವರು ಗುಳ್ಳೆನರಿಯನ್ನು ಹುಡುಕುವ ಟಾಸ್ಕ್ ಕೊಟ್ಟಿದ್ದಾರೆ. ಇದರಿಂದ ಆಟದ ರೋಚಕತೆ ಹೆಚ್ಚಾಗಿದೆ. ಯಶಸ್​ ಅವರಿಗೆ ಇದು ಒಂದು ರೀತಿಯಲ್ಲಿ ಸಂಕಷ್ಟವೂ ಹೌದು, ಲಾಭವೂ ಹೌದು. ಈ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 26, 2026 08:31 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More