ಒನ್‌ವೇಲಿ ಬಂದ ಬೈಕ್ ಸವಾರ: ತಡೆದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಕಾನ್ಸ್ಟೇಬಲ್ಗೆ ನಿಂದನೆ
ಒನ್‌ವೇನಲ್ಲಿ ಬಂದಿದ್ದ ಬೈಕ್ ಸವಾರನನ್ನು ಕಾನ್ಸ್‌ಟೇಬಲ್ ತಡೆದಿದ್ದಕ್ಕೆ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗರದ ಹೆಚ್‌ಎಎಲ್‌ನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.
ಬೆಂಗಳೂರು: ಒನ್‌ವೇನಲ್ಲಿ ಬಂದಿದ್ದ ಬೈಕ್ ಸವಾರನನ್ನು ಕಾನ್ಸ್‌ಟೇಬಲ್ (Constable) ತಡೆದಿದ್ದಕ್ಕೆ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗರದ ಹೆಚ್‌ಎಎಲ್‌ನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. ಇತರೆ ವಾಹನ ಸವಾರರು ವಿಡಿಯೋ ಸೆರೆ ಹಿಡಿದಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ತೆರೆಗೆ ಕಟ್ಟುತ್ತೇನೆ ಎಂದು ಹೇಳಿ ಬೈಕ್ ಸವಾರ ದರ್ಪ ಮೆರೆದಿದ್ದಾರೆ. ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿ ಸಂಚಾರಕ್ಕೂ ತೊಂದರೆ ಕೊಟ್ಟಿದ್ದಾನೆ. ಹೆಚ್‌ಎಎಲ್ ಠಾಣೆಗೆ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ದೂರು ನೀಡಿದ್ದು, ಸವಾರನನ್ನು ವಶಕ್ಕೆ ಪಡೆದು ಬೈಕ್ ಸೀಜ್ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos