Protest at Freedom Park: ಆಟೋರಿಕ್ಷಾ ಚಾಲಕರಿಂದ ದೈಹಿಕ ಹಲ್ಲೆ ನಡೆಯುತ್ತಿದೆ ಎಂದು ಬೈಕ್ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಅರೋಪ

Protest at Freedom Park: ಆಟೋರಿಕ್ಷಾ ಚಾಲಕರಿಂದ ದೈಹಿಕ ಹಲ್ಲೆ ನಡೆಯುತ್ತಿದೆ ಎಂದು ಬೈಕ್ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಅರೋಪ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 27, 2023 | 1:01 PM

ನಮ್ಮಿಂದ ಯಾವುದೇ ಪ್ರಮಾದವಾಗದಿದ್ದರೂ, ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿದ್ದರೂ ನಮ್ಮ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಬೈಕ್ ಟ್ಯಾಕ್ಸಿ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರು: ಬೈಕ್ ಟ್ಯಾಕ್ಸಿಗಳಿಂದಾಗಿ ನಮ್ಮ ಸಂಪಾದನೆ ಕಡಿಮೆಯಾಗುತ್ತಿದೆ, ಬದುಕು ನಡೆಸುವುದು ದುಸ್ತರವಾಗುತ್ತಿದೆ ಎಂದು ಆಟೋರಿಕ್ಷಾ ಚಾಲಕರು (auto rickshaw drivers) ಪ್ರತಿಭಟನೆ ನಡೆಸುತ್ತಾರೆ. ಆದರೆ ಆಟೋ ಚಾಲಕರಿಂದ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ, ಅವರು ನಮ್ಮ ಮೇಲೆ ದೈಹಿಕ ಹಲ್ಲೆ ನಡೆಸುತ್ತಾರೆ ಎಂದು ಅವರ ವಿರುದ್ಧ ಬೈಕ್ ಟ್ಯಾಕ್ಸಿ ಚಾಲಕರು ನಗರದ ಫ್ರೀಡಂ ಪಾರ್ಕ್ ನಲ್ಲಿ (Freedom Park) ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮಿಂದ ಯಾವುದೇ ಪ್ರಮಾದವಾಗದಿದ್ದರೂ, ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿದ್ದರೂ ನಮ್ಮ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಬೈಕ್ ಟ್ಯಾಕ್ಸಿ ಸಂಘದ ಪದಾಧಿಕಾರಿಯೊಬ್ಬರು (office-bearer) ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 27, 2023 01:01 PM