Karnataka Assembly Elections: ಹೊನ್ನಾಳಿ ಬಳಿ ಸಿಕ್ಕಿಬಿದ್ದ ಬೈಕ್ ಸವಾರನೊಬ್ಬ ಅಕ್ರಮ ಹಣವನ್ನು ಸೊಂಟದ ಸುತ್ತ ಪ್ಯಾಂಟ್ನಲ್ಲಿ ಸಿಕ್ಕಿಸಿಕೊಂಡಿದ್ದ!
ಅವನ ಸೊಂಟದಿಂದ ದಾಖಲೆರಹಿತ ರೂ. 7.5 ಲಕ್ಷ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ! ಹಣದ ಮೂಲ ಬಗ್ಗೆ ಸೈಫುಲ್ಲಾ ಮತ್ತು ಕುಮಾರ ವಿಚಾರಣೆ ನಡೆಸಲಾಗುತ್ತಿದೆ.
ದಾವಣಗೆರೆ: ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣವನ್ನು ಹೇಗೆಲ್ಲ ಸಾಗಿಲಾಗುತ್ತದೆ ಅಂತ ಇಲ್ಲೊಂದು ಫ್ರೆಶ್ ಉದಾಹರಣೆ ಇದೆ. ಘಟನೆ ನಡೆದಿದ್ದು ಹೊನ್ನಾಳಿ (Honnali) ವಿಧಾನಸಭಾ ಕ್ಷೇತ್ರದ ಜೀವನಹಳ್ಳಿ ಚೆಕ್ ಪೋಸ್ಟ್ ಬಳಿ. ಬೈಕ್ ಮೇಲೆ ಕೂತಿರುವ ಆಸಾಮಿಯ ಹೆಸರು ಸೈಪುಲ್ಲಾ (Saifullah) ಅಂತೆ. ಅವನು ತನ್ನ ಸಂಗಡಿಗ ಕುಮಾರ್ (Kumar) ಎನ್ನುವವನ ಜೊತೆ ಹೀಗೆ ಸೊಂಟದ ಸುತ್ತ ಪ್ಯಾಂಟಿನಲ್ಲಿ ನೋಟಿನ ಕಂತೆಗಳನ್ನು ಸಿಕ್ಕಿಸಿಕೊಂಡು ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನ ಸೊಂಟದಿಂದ ದಾಖಲೆರಹಿತ ರೂ. 7.5 ಲಕ್ಷ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ! ಹಣದ ಮೂಲ ಬಗ್ಗೆ ಸೈಫುಲ್ಲಾ ಮತ್ತು ಕುಮಾರ ವಿಚಾರಣೆ ನಡೆಸಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ