ರಸ್ತೆಯಲ್ಲೇ ಮಹಿಳಾ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ

ರಸ್ತೆಯಲ್ಲೇ ಮಹಿಳಾ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ

ಸುಷ್ಮಾ ಚಕ್ರೆ
|

Updated on: Dec 02, 2024 | 4:17 PM

ಉತ್ತರಪ್ರದೇಶದ ಮೊರಾದಾಬಾದ್‌ನ ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ಲೇಡಿ ಕಾನ್‌ಸ್ಟೆಬಲ್ ಅನ್ನು ನಿಲ್ಲಿಸಿ, ಬೈಕ್ ಸವಾರನೊಬ್ಬ ಕಪಾಳಮೋಕ್ಷ ಮಾಡಿ ಒದ್ದಿದ್ದಾನೆ. ಬಳಿಕ ಬಲವಂತವಾಗಿ ಆಕೆಗೆ ಚುಂಬಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಗಲು ಹೊತ್ತಿನಲ್ಲಿಯೇ ಬೈಕ್​ನಲ್ಲಿ ಬಂದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ. ಇದು ಆ ಪ್ರದೇಶದ ಮಹಿಳೆಯ ಸುರಕ್ಷತೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ. ಈ ವೀಡಿಯೊದಲ್ಲಿ ಬೈಕ್ ಸವಾರನೊಬ್ಬ ಪೊಲೀಸರ ಬಳಿಗೆ ಬರುವುದು ಮತ್ತು ಅವಳೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನೋಡಬಹುದು. ಆಕೆ ಯೂನಿಫಾರಂ ಧರಿಸಿರದ ಕಾರಣ ಆತನಿಗೆ ಆಕೆ ಕಾನ್​ಸ್ಟೆಬಲ್ ಎಂಬುದು ಗೊತ್ತಾಗಿಲ್ಲ. ಆತ ಅವಳನ್ನು ಬಲವಂತವಾಗಿ ಹಿಡಿದುಕೊಂಡು, ಸಾರ್ವಜನಿಕವಾಗಿ ಅವಳನ್ನು ಚುಂಬಿಸಿದ್ದಾನೆ. ಆತನಿಂದ ಬಿಡಿಸಿಕೊಳ್ಳಲಾಗದೆ ಆಕೆ ಒದ್ದಾಡಿದ್ದಾಳೆ. ಸುತ್ತಲೂ ನಿಂತಿದ್ದ ಜನ ಆತನನ್ನು ಹಿಡಿದು ಹೊಡೆಯಲು ಹೋಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ