BitCoin Value: ಯಾಕಿಷ್ಟು ಬೇಡಿಕೆ ಪಡೆಯುತ್ತಿದೆ ಬಿಟ್​ಕಾಯಿನ್? ಕ್ರಿಪ್ಟೋಕರೆನ್ಸಿಯ ದಾಖಲೆ ನೋಡಿ..

ಕಿರಣ್​ ಐಜಿ

Updated on: Apr 23, 2024 | 7:15 AM

ಬಿಟ್​ಕಾಯಿನ್ ಮೌಲ್ಯ ಮೊದಲ ಬಾರಿಗೆ 72,000 ಡಾಲರ್ ಮೈಲಿಗಲ್ಲು ದಾಟಿದೆ. ಒಂದು ಹಂತದಲ್ಲಿ 73,000 ಡಾಲರ್ ಮಟ್ಟದ ಸಮೀಪಕ್ಕೆ ಏರಿತ್ತು. ಕಳೆದ ಆರು ತಿಂಗಳಿಂದ ಬಿಟ್​ಕಾಯಿನ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ.

ಕ್ರಿಪ್ಟೋ ಕರೆನ್ಸಿ ಬಗ್ಗೆ ಬಹಳಷ್ಟು ಜನರಿಗೆ ಷೇರು ಮಾರುಕಟ್ಟೆಯ ಬಗ್ಗೆ ಇರುವಷ್ಟೇ ಕುತೂಹಲವಿದೆ. ಕ್ರಿಪ್ಟೋ ಹೂಡಿಕೆಯಲ್ಲಿ ಈಗಾಗಲೇ ಹಲವರು ತೊಡಗಿಸಿಕೊಂಡಿದ್ದಾರೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಟ್ರೇಡಿಂಗ್ ವಹಿವಾಟು ನಡೆಯುತ್ತದೆ. ಬಿಟ್​ಕಾಯಿನ್ ಮೌಲ್ಯ ಮೊದಲ ಬಾರಿಗೆ 72,000 ಡಾಲರ್ ಮೈಲಿಗಲ್ಲು ದಾಟಿದೆ. ಒಂದು ಹಂತದಲ್ಲಿ 73,000 ಡಾಲರ್ ಮಟ್ಟದ ಸಮೀಪಕ್ಕೆ ಏರಿತ್ತು. ಕಳೆದ ಆರು ತಿಂಗಳಿಂದ ಬಿಟ್​ಕಾಯಿನ್ ಮೌಲ್ಯ ಮೂರು ಪಟ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುವ ಸೂಚನೆ ಇರುವುದು, ಮತ್ತು ಬಿಟ್​ಕಾಯಿನ್ ಇಟಿಎಫ್​ಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಹಣದ ಹರಿವು ಬರುತ್ತಿರುವುದು ಈ ಕ್ರಿಪ್ಟೋಕರೆನ್ಸಿ ಮೌಲ್ಯ ಹೆಚ್ಚಲು ಕಾರಣವಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.