Ramesh Jarkiholi: ಬಿಜೆಪಿ-ಜೆಡಿಎಸ್ ಮೈತ್ರಿ ಅಂತಿಮ ಹಂತಕ್ಕೆ -ಗಣೇಶನ ಹಬ್ಬದ ದಿನ ಕುಮಾರಸ್ವಾಮಿ ಭೇಟಿ ಬಳಿಕ ಇಂದು ದಿಲ್ಲಿಗೆ ಹೊರಟ ರಮೇಶ್ ಜಾರಕಿಹೊಳಿ

|

Updated on: Sep 21, 2023 | 2:48 PM

BJP JDS alliance: ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆಸಲು ಬಿಜೆಪಿ ವರಿಷ್ಠರು ತಮ್ಮ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮುಂಚೂಣಿಗೆ ಬಿಟ್ಟಂತಿದೆ. ತನ್ನಿಮಿತ್ತ, ಮೊನ್ನೆ ಗಣೇಶನ ಹಬ್ಬದ ದಿನ ರಮೇಶ್ ಜಾರಕಿಹೊಳಿ ಅವರು ಸೀದಾ ಕುಮಾರಣ್ಣನ ಮನೆಗೆ ತೆರಳಿ ಮೈತ್ರಿ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರು ಅದೇನು ಮೀನಾಮೇಶ ಎಣಿಸುತ್ತಿದ್ದಾರೂ ಅಥವಾ ಕಾಂಗ್ರೆಸ್​​ ಆಡಳಿತವನ್ನು ಹಣಿಯಲು ಚಾಣಾಕ್ಯ ರಣತಂತ್ರವನ್ನೇ ಹೆಣೆಯುತ್ತಿದ್ದಾರೋ ಅಂತೂ ಲೀಡರ್​ ಆಫ್​ ಅಪೊಸಿಷನ್​ ನೇಮಕ ಇನ್ನೂ ನೆರವೇರಿಲ್ಲ. ಈ ಮಧ್ಯೆ, ಜೆಡಿಎಸ್​ ಜೊತೆ ಕೈಜೋಡಿಸುವುದು ಬಹುತೇಕ ಅಂತಿಮ ಹಂತಕ್ಕೆ ಬಂದಂತಿದೆ. ಬಿಜೆಪಿ-ಜೆಡಿಎಸ್ ಭಾಯಿ ಭಾಯಿ ಆಗುವ ಮುನ್ಸೂಚನೆಗಳು ದಟ್ಟವಾಗಿರುವುದರಿಂದ ಚುನಾವಣೆ ಮುಗಿದು ನಾಲ್ಕು ತಿಂಗಳೇ ಆಗಿದ್ದರೂ ಇನ್ನೂ LoP ಆಯ್ಕೆಯಾಗಿಲ್ಲ. ಇನ್ನು ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆಸಲು ಬಿಜೆಪಿ ವರಿಷ್ಠರು ತಮ್ಮ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮುಂಚೂಣಿಗೆ ಬಿಟ್ಟಂತಿದೆ. ತನ್ನಿಮಿತ್ತ, ಮೊನ್ನೆ ಗಣೇಶನ ಹಬ್ಬದ ದಿನ ರಮೇಶ್ ಜಾರಕಿಹೊಳಿ ಅವರು ಸೀದಾ ಕುಮಾರಣ್ಣನ ಮನೆಗೆ ತೆರಳಿ ಮೈತ್ರಿ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮೈತ್ರಿ ಮಾತುಕತೆಯಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ

ಅದರ ಮುಂದುವರಿದ ಭಾಗವಾಗಿ ಇಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರನ್ನು ಜೊತೆ ಮಾಡಿಕೊಂಡು ದಿಲ್ಲಿ ಫ್ಲೈಟ್​ ಹತ್ತಿದ್ದಾರೆ. ಅದೇ ವೇಳೆ, ಸೋಮವಾರ ಹಬ್ಬದ ದಿನ ಹೆಚ್ ಡಿಕೆ ಜೊತೆ ಮೀಟಿಂಗ್ ಮಾಡಿದ್ದ ರಮೇಶ್ ಜಾರಕಿಹೊಳಿ ಅವರೂ ಸಹ ಏಕಾಂಗಿಯಾಗಿ ದೆಹಲಿ ತಲುಪಿಕೊಂಡಿದ್ದಾರೆ.

ಇಂದು ಸಂಜೆ ಕಮಲ-ದಳ ದೋಸ್ತಿ ಅಂತಿಮ ಹಂತದ ಮಾತುಕತೆ ಏರ್ಪಟ್ಟಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಮತ್ತು ಗೃಹ ಸಚಿವ ಅಮಿತ್ ಶಾ ಜೊತೆ ಹೆಚ್ ಡಿ ಕೆ ಮೀಟಿಂಗ್ ನಡೆಯಲಿದೆ. ಅಮಿತ್ ಶಾ ಮೀಟಿಂಗ್ ಸಂದರ್ಭದಲ್ಲಿ ಬಹುತೇಕ ಮೈತ್ರಿ ಮತ್ತು ಸೀಟ್ ಷೇರಿಂಗ್ ಲೆಕ್ಕಾಚಾರ ಫೈನಲೈಸ್​ ಆಗುವ ಸಾಧ್ಯತೆಗಳಿವೆ.

ನಾಳೆ ಶುಕ್ರವಾರವೇ ಜಂಟಿ ಸುದ್ದಿಗೋಷ್ಠಿ ಮೂಲಕ ಮೈತ್ರಿ ಘೋಷಣೆ ಮಾಡುವ ಅಂದಾಜಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ನಾಲ್ಕೈದು ಸೀಟು ಬೇಡಿಕೆ ಇಡಲು ಜೆಡಿಎಸ್ ನಿರ್ಧಾರ ಮಾಡಿದಂತಿದೆ. ಹಾಸನ, ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣು ನೆಟ್ಟಿದೆ. ಬಿಜೆಪಿ ತುಮಕೂರು ಬಿಟ್ಟುಕೊಡದಿದ್ರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನಾದರೂ ಕೇಳಲು ಜೆಡಿಎಸ್​ ಚಿಂತನೆ ನಡೆಸಿದೆ ಎನ್ನಲಾಗಿದೆ. ಮೈತ್ರಿ ಆಖೈರು ಆಗಿ, ಟಿಕೆಟ್​​ ಹಂಚಿಕೆ ಪೂರ್ತಿಯಾಗುತ್ತಿದ್ದಂತೆ​ ತಡವಾಗಿಯಾದರೂ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಯಾಗುವ ಸಂಭವವೂ ಇದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

Published on: Sep 21, 2023 02:46 PM