3 ವರ್ಷದ ಬಳಿಕ ಕಣ್ಮುಂದೆ ಬಂದ ಮಗನನ್ನು ಕಂಡು ಭಾವುಕರಾದ ತಾಯಿ; ಉಡುಪಿಯ ಜನ ಮೆಚ್ಚಿದ ವಿಡಿಯೋ
ಉಳಿದವರು ಕಂಡಂತೆ ಸಿನಿಮಾದಲ್ಲಿ ಬರುವ ತಾಯಿಯ ಅಪ್ಪುಗೆ ಬೆಳೆದ ಮರವಾಗಿ, ನಿಂತರೆ ತಲೆ ಬಾಗಿ ಈ ಭೂಮಿ ಮೀಟಿ ಸ್ವರ್ಗವನ್ನೇ ಮತ್ತೆ ಚಿಗುರಿಸಿದೆ ಎಂಬ ಹಾಡನ್ನು ಹೇಳಿ ರೋಮಾಂಚನ ಗೊಂಡವರು ಸಾವಿರಾರು. ಆದರೆ ಇದೇ ರೀತಿಯ ತಾಯಿ ಮಮತೆಯನ್ನು ವ್ಯಕ್ತಪಡಿಸುವ ಘಟನೆಯೊಂದು ಉಡಪಿಯಲ್ಲಿ ನಡೆದಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಎಂಬುವವರು 3 ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಆದರೆ ಅವರು ಬರುವುದನ್ನು ತಮ್ಮ ತಾಯಿಗೆ ತಿಳಿಸಿಲ್ಲ. ತನ್ನ ತಾಯಿ ಸುಮಿತ್ರರಿಗೆ ತಿಳಿಸದೇ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ತಾಯಿ ಎಂದಿನಂತೆ ಗಂಗೊಳ್ಳಿ ಬಂದರಿನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ರು. ಈ ವೇಳೆ ರೋಹಿತ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುಖವನ್ನು ಮರೆ ಮಾಚಿಸಿ ತಾಯಿಯ ಮುಂದೆ ಬಂದು ನಿಂತು ಮೀನು ವ್ಯಾಪಾರ ಮಾಡಿದ್ದಾರೆ. ಅಷ್ಟರಲ್ಲೇ ಮಗನ ಧ್ವನಿಯನ್ನು ಗುರುತಿಸಿದ ತಾಯಿ ಮುಖದ ಮೇಲಿನ ಬಟ್ಟೆ ಸರಿಸಿ ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ.
ಮೂರು ವರ್ಷದ ಬಳಿಕ ಬಂದ ಮಗನನ್ನು ನೋಡುತ್ತಿದ್ದಂತೆ ತಾಯಿಯ ಕಣ್ಣಾಲಿ ಒದ್ದೆಯಾಗಿದ್ದವು. ತಾಯಿ-ಮಗನ ಈ ವಿಡಿಯೋ ವೈರಲ್ ಆಗುತ್ತಿದ್ದು ವಿಡಿಯೋ ನೋಡಿದವರ ಕಣ್ಣುಗಳಲ್ಲಿ ನೀರು ಸುಲಿದಾಡಿದೆ. ಹಾಗೂ ತಾಯಿಯ ಪ್ರೀತಿಯ ಬಗ್ಗೆ ಜನ ಮಾತಾಡ್ತಿದ್ದಾರೆ.
Published on: Sep 21, 2023 01:53 PM
Latest Videos