ಕಾವೇರಿ ಜಲವಿವಾದ; ಸಂಕಷ್ಟ ವರ್ಷದಲ್ಲಿ ಇನ್ನೂ ಸಂಕಷ್ಟ ಸೂತ್ರ ರೂಪಿಸಿಲ್ಲ, ಕೇಂದ್ರದ ಮಧ್ಯಸ್ಥಿಕೆ ಕೋರಿದ್ದೇವೆ: ಸಿದ್ದರಾಮಯ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ಕೋರಿ ಸಚಿವರ ಶೇಖಾವತ್ ಅವರಿಗೆ ಮನವಿ ಮಾಡಿದ್ದೇವೆ ಮತ್ತು ಪ್ರಧಾನಿಗೆ ಮತ್ತೊದು ಪತ್ರವನ್ನೂ ಬರೆಯಲಾಗಿದೆ ಎಂದು ಸಿಎಂ ಹೇಳಿದರು. ಬಹಳ ಬ್ಯೂಸಿಯಾಗಿರುವ ಪ್ರಧಾನಿ ತಮಗಿನ್ನೂ ಸಮಯ ನೀಡಿಲ್ಲ ಎಂದು ಅವರು ಹೇಳಿದರು.
ದೆಹಲಿ: ಗಡ್ಡಕ್ಕೆ ಬೆಂಕಿ ಹತ್ತಿದಾದ ಬಾವಿ ತೋಡುವ ಜಾಯಮಾನದ ಕರ್ನಾಟಕ ಸರ್ಕಾರ ಇಂದು ಬೆಳಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ ಶೇಖಾವತ್ ರನ್ನು (Gajendra Singh Shekhawat) ಭೇಟಿಮಾಡಿತು. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಮಳೆ ಕೊರತೆಯಿಂದ ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ತೀವ್ರ ಸ್ವರೂಪದ ಬಿಕ್ಕಟ್ಟು ಎದುರಾಗಿರುವುದನ್ನು ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ ಮತ್ತು ಕಾವೇರಿ ಹರಿಯುವ ನಾಲ್ಕು ರಾಜ್ಯಗಳ ನಾಯಕರನ್ನು ಕರೆಸಿ ಕೇಂದ್ರ ಸರ್ಕಾರ ಮಾತಾಡಬೇಕು ಅಂತ ಹೇಳಿದ್ದೇವೆ ಎಂದು ಹೇಳಿದರು. ಉದು ಕೊರತೆ ಮಳೆಯ ಸಂಕಷ್ಟ ವರ್ಷವಾಗಿರುವುದರಿಂದ ಸಂಕಷ್ಟ ಸೂತ್ರ ಇದುವರೆಗೆ ರೂಪಿಸಿಲ್ಲ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಮಧ್ಯಸ್ಥಿಕೆ ಕೋರಿ ಸಚಿವರ ಶೇಖಾವತ್ ಅವರಿಗೆ ಮನವಿ ಮಾಡಿದ್ದೇವೆ ಮತ್ತು ಪ್ರಧಾನಿಗೆ ಮತ್ತೊದು ಪತ್ರವನ್ನೂ ಬರೆಯಲಾಗಿದೆ ಎಂದು ಸಿಎಂ ಹೇಳಿದರು. ಬಹಳ ಬ್ಯೂಸಿಯಾಗಿರುವ ಪ್ರಧಾನಿ ತಮಗಿನ್ನೂ ಸಮಯ ನೀಡಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ