ಕಾವೇರಿ ಜಲವಿವಾದ: ದೆಹಲಿಯಲ್ಲಿ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿಯಾದ ಸಿದ್ದರಾಮಯ್ಯ ಮತ್ತು ನಿಯೋಗ

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾರದ ಹೆಚ್ ಸಿ ಮಹಾದೇವಪ್ಪ, ಹೆಚ್ ಕೆ ಪಾಟೀಲ್, ಎನ್ ಚಲುವರಾಯ ಸ್ವಾಮಿ ಮತ್ತು ದೆಹಲಿಯಲ್ಲಿ ಕರ್ನಾಟದ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಇಂದು ಶೇಖಾವತ್ ರನ್ನು ಭೇಟಿಯಾದರು.

ಕಾವೇರಿ ಜಲವಿವಾದ: ದೆಹಲಿಯಲ್ಲಿ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿಯಾದ ಸಿದ್ದರಾಮಯ್ಯ ಮತ್ತು ನಿಯೋಗ
|

Updated on: Sep 21, 2023 | 11:37 AM

ದೆಹಲಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಹೇಳಿದ ಪ್ರಕಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರೊಂದಿಗೆ ಸಿದ್ದರಾಮಯ್ಯ (Siddaramaiah ) ನೇತೃತ್ವದ ನಿಯೋಗ ನಿನ್ನೆ ಸಾಯಂಕಾಲವೇ ಭೇಟಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಭೇಟಿ ಇಂದು ಏರ್ಪಟ್ಟಿದೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾರದ ಹೆಚ್ ಸಿ ಮಹಾದೇವಪ್ಪ, ಹೆಚ್ ಕೆ ಪಾಟೀಲ್, ಎನ್ ಚಲುವರಾಯ ಸ್ವಾಮಿ ಮತ್ತು ದೆಹಲಿಯಲ್ಲಿ ಕರ್ನಾಟದ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಇಂದು ಶೇಖಾವತ್ ರನ್ನು ಭೇಟಿಯಾದರು. ಕೇಂದ್ರ ಸಚಿವರನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಶಾಲುಗಳನ್ನು ಹೊದೆಸಿ, ಬೋಕೆ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸುವುದನ್ನು ಇಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us