ಸಿಸಿಬಿ ಕಚೇರಿಗೆ ತನ್ನ ವಕೀಲನೊಂದಿಗೆ ಆಗಮಿಸಿದ ಅಭಿನವ ಹಾಲಶ್ರೀ ಸ್ವಾಮಿಯ ಆಪ್ತ ಮೈಸೂರಿನ ಪ್ರಣವ್

ಸಿಸಿಬಿ ಕಚೇರಿಗೆ ತನ್ನ ವಕೀಲನೊಂದಿಗೆ ಆಗಮಿಸಿದ ಅಭಿನವ ಹಾಲಶ್ರೀ ಸ್ವಾಮಿಯ ಆಪ್ತ ಮೈಸೂರಿನ ಪ್ರಣವ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 21, 2023 | 2:55 PM

ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ ಬಳಿಕ ಹಲವಾರು ಸಂಗತಿಗಳು ಬೆಳಕಿಗೆ ಬಂದವು. ಪ್ರಕರಣದಲ್ಲಿ ಅಭಿನವ ಸ್ವಾಮಿಗೆ ಒಂದೂವರೆ ಕೋಟಿ ರೂ. ಸಂದಾಯವಾಗಿದ್ದನ್ನು ಚೈತ್ರಾ ಪೊಲೀಸರಿಗೆ ತಿಳಿಸಿದ್ದಳು. ಆಕೆಯ ಬಂಧನದ ಸುದ್ದಿ ತಿಳಿಯುತ್ತಿದಂತೆಯೇ ಪರಾರಿಯಾಗಿದ್ದ ಅಭಿನವ ಸ್ವಾಮಿಯನ್ನು ಸೋಮವಾರ ಒಡಿಶಾದಲ್ಲಿ ಬಂಧಿಸಲಾಗಿತ್ತು.

ಬೆಂಗಳೂರು: ಬುಧವಾರದಂದು ಮೈಸೂರಿಂದ ಬಳ್ಳಾರಿಯ ಹಿರೇ ಹಡಗಲಿಯಲ್ಲಿರುವ ಹಾಲಶ್ರೀ ಮಠಕ್ಕೆ ತೆರಳಿ ಅಭಿನವ ಸ್ವಾಮಿಗೆ (Abhinav Swamy) ಸೇರಿದ ರೂ. 60 ಲಕ್ಷದಷ್ಟು ಹಣವಿದ್ದ ಬ್ಯಾಗೊಂದನ್ನು ಯಾರೂ ದಿಕ್ಕಿಲ್ಲದ ಹಾಲಶ್ರೀ ಮಠದಲ್ಲಿಟ್ಟು (Halashri Mutt) ವಾಪಸ್ಸು ಹೋಗಿದ್ದ ಮೈಸೂರಿನ ಪ್ರಣವ್ (Prannav) ಇಂದು ಬೆಂಗಳೂರು ಸಿಸಿಬಿ ಕಚೇರಿಗೆ ಆಗಮಿಸಿದರು. ಕಚೇರಿಗೆ ಅವರು ತಮ್ಮ ವಕೀಲನೊಂದಿಗೆ ಬಂದಿರೋದನ್ನು ನೋಡಬಹುದು. ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಸ್ವಾಮಿಗೆ ಪ್ರಣವ್ ಆಪ್ತರು ಅಂತ ಹೇಳಲಾಗುತ್ತಿದೆ. ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡುಸುವುದಾಗಿ ಚೈತ್ರಾ ಕುಂದಾಪುರ 5 ಕೋಟಿ ರೂ. ವಂಚಿಸಿದ ಅರೋಪದಲ್ಲಿ ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿದ ಬಳಿಕ ಹಲವಾರು ಸಂಗತಿಗಳು ಬೆಳಕಿಗೆ ಬಂದವು. ಪ್ರಕರಣದಲ್ಲಿ ಅಭಿನವ ಸ್ವಾಮಿಗೆ ಒಂದೂವರೆ ಕೋಟಿ ರೂ. ಸಂದಾಯವಾಗಿದ್ದನ್ನು ಚೈತ್ರಾಳೇ ಪೊಲೀಸರಿಗೆ ತಿಳಿಸಿದ್ದಳು. ಆಕೆಯ ಬಂಧನದ ಸುದ್ದಿ ತಿಳಿಯುತ್ತಿದಂತೆಯೇ ಪರಾರಿಯಾಗಿದ್ದ ಅಭಿನವ ಸ್ವಾಮಿಯನ್ನು ಸೋಮವಾರ ಒಡಿಶಾದಲ್ಲಿ ಬಂಧಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ