ಕಾವೇರಿ ನೀರು, ಬರ ಸೇರಿದಂತೆ ರಾಜ್ಯದ ಮುಂದೆ ಹಲವಾರು ಸಮಸ್ಯೆಗಳಿಗೆ, ರಾಜಣ್ಣ ಅವುಗಳ ಬಗ್ಗೆ ಯೋಚಿಸಬೇಕು: ಹೆಚ್ ಸಿ ಬಾಲಕೃಷ್ಣ
ಶಾಸಕರಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಳಷ್ಟಿದ್ದಾರೆ, ನಿಗಮ-ಮಂಡಳಿಗಳ ಆದ್ಯಕ್ಷ ಸ್ಥಾನವಾದರೂ ಸಿಕ್ಕೀತು ಅಂತ ಕಾಯುತ್ತಿದ್ದಾರೆ. ಆದರೆ ನೇಮಕಾತಿಗಳು ಇದುವರೆಗೆ ಆಗಿಲ್ಲ, ರಾಜಣ್ಣ ಇದರ ಬಗ್ಗೆ ಯಾಕೆ ಮಾತಾಡೋದಿಲ್ಲ ಅಂತ ಬಾಲಕೃಷ್ಣ ಪ್ರಶ್ನಿಸಿದರು. ಡಿಸಿಎಂಗಳಿಗೆ ಕಿರೀಟವೇನೂ ಸಿಗದು ಅವರು ಸಹ ಮಂತ್ರಿಗಳಂತೆಯೇ ಎಂದು ಅವರು ಹೇಳಿದರು.
ಬೆಂಗಳೂರು: ರಾಜ್ಯಕ್ಕೆ ಮೂರು ಉಪ ಮುಖ್ಯಮಂತ್ರಿಗಳು (deputy chief ministers) ಬೇಕು ಅಂತ ಹೇಳಿ ಕಾಂಗ್ರೆಸ್ ಪಕ್ಷ ದ ಸೀಮಿಯರ್ ಲೀಡರ್ ಮತ್ತು ಸಹಕಾರ ಸಚಿವರಾಗಿರುವ ಕೆಎನ್ ರಾಜಣ್ಣ (KN Rajanna) ಸುಖಾಸುಮ್ಮನೆ ವಿವಾದ ಸೃಷ್ಟಿಸಿದ್ದಾರೆ, ಮಂತ್ರಿಗಳಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಅವುಗಳ ಕಡೆ ಗಮನ ಹರಿಸಬೇಕು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ; ಒಬ್ಬ ಸಿಎಂ ಮತ್ತು ಒಬ್ಬ ಡಿಸಿಎಂರನ್ನು ಹೈಕಮಾಂಡ್ ನೇಮಕ ಮಾಡಿಯಾಗಿದೆ, ರಾಜಣ್ಣಗ್ಯಾಕೆ ಇಂಥ ತೆವಲು ಹುಟ್ಟಿಕೊಂಡಿದೆ ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಕಾವೇರಿ ನೀರು ವಿವಾದ, ಬರ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿವೆ, ಮಂತ್ರಿಗಳು ಅವುಗಳ ಬಗ್ಗೆ ಯೋಚನೆ ಮಾಡಬೇಕು ಎಂದು ಬಾಲಕೃಷ್ಣ ಹೇಳಿದರು. ಶಾಸಕರಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಳಷ್ಟಿದ್ದಾರೆ, ನಿಗಮ-ಮಂಡಳಿಗಳ ಆದ್ಯಕ್ಷ ಸ್ಥಾನವಾದರೂ ಸಿಕ್ಕೀತು ಅಂತ ಕಾಯುತ್ತಿದ್ದಾರೆ. ಆದರೆ ನೇಮಕಾತಿಗಳು ಇದುವರೆಗೆ ಆಗಿಲ್ಲ, ರಾಜಣ್ಣ ಇದರ ಬಗ್ಗೆ ಯಾಕೆ ಮಾತಾಡೋದಿಲ್ಲ ಅಂತ ಬಾಲಕೃಷ್ಣ ಪ್ರಶ್ನಿಸಿದರು. ಡಿಸಿಎಂಗಳಿಗೆ ಕಿರೀಟವೇನೂ ಸಿಗದು ಅವರು ಸಹ ಮಂತ್ರಿಗಳಂತೆಯೇ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ