ಮೂರು ಡಿಸಿಎಂಗಳ ಬೇಡಿಕೆಗೆ ಬದ್ಧ ಮತ್ತು ಅದಕ್ಕಾಗಿ ಯಾವುದೇ ರಾಜಕೀಯ ಸವಾಲಿಗೆ ಸಿದ್ಧ: ಕೆಎನ್ ರಾಜಣ್ಣ

ಮೂರು ಡಿಸಿಎಂಗಳ ಬೇಡಿಕೆಗೆ ಬದ್ಧ ಮತ್ತು ಅದಕ್ಕಾಗಿ ಯಾವುದೇ ರಾಜಕೀಯ ಸವಾಲಿಗೆ ಸಿದ್ಧ: ಕೆಎನ್ ರಾಜಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 20, 2023 | 2:59 PM

ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಆಯ್ಕೆ ಸಂದರ್ಭದಲ್ಲಿ ಹೈ ಕಮಾಂಡ್ ಕೇವಲ ಒಂದು ಡಿಸಿಎಂ ಅಂತ ಹೇಳಿದ್ದನ್ನು ರಾಜಣ್ಣಗೆ ಜ್ಞಾಪಿಸಿದಾಗ, ವರಿಷ್ಠರು ಹಾಗೆ ಹೇಳಿದ್ದು ತನಗೆ ಗೊತ್ತಿಲ್ಲ ಅದು ನಿಜವಾಗಿದ್ದರೆ ಮೂರು ಡಿಸಿಎಂಗಳ ಪ್ರಶ್ನೆ ಉದ್ಭವಿಸದು ಎಂದರು. ಮಹಿಳೆಯೊಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ತೇಲಿಬರುತ್ತಿರುವ ಮಾತಿನ ಬಗ್ಗೆ ಸಚಿವರು, ಯಾಕಾಗಬಾರದು? ಅಂತ ಕೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮೂರು ಡಿಸಿಎಂಗಳ ಬೇಡಿಕೆಗೆ ತಾನು ಬದ್ಧ ಅಂತ ಹೇಳಿ ಅದಕ್ಕಾಗಿ ಯಾವುದೇ ರಾಜಕೀಯ ಸವಾಲು (political challenge) ಎದುರಿಸಲು ಸಿದ್ಧ ಎಂದು ಹೇಳಿದರು. ತಮ್ಮ ಬೇಡಿಕೆಗೆ ತೀವ್ರ ಸ್ವರೂಪದ ವಿರೋಧ ಮತ್ತು ನಾಯಕರಲ್ಲಿ ಇರುಸು ಮುರುಸು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು; ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ (democratic system) ಜಾರಿಯಲ್ಲಿದ್ದು ವೈಚಾರಿಕ ಭಿನ್ನತೆಗೆ ಅವಕಾಶವಿದೆಯೇ ಹೊರತು ಭಿನ್ನಮತಕ್ಕಿಲ್ಲ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಆಯ್ಕೆ ಸಂದರ್ಭದಲ್ಲಿ ಹೈ ಕಮಾಂಡ್ ಕೇವಲ ಒಂದು ಡಿಸಿಎಂ ಅಂತ ಹೇಳಿದ್ದನ್ನು ರಾಜಣ್ಣಗೆ ಜ್ಞಾಪಿಸಿದಾಗ, ವರಿಷ್ಠರು ಹಾಗೆ ಹೇಳಿದ್ದು ತನಗೆ ಗೊತ್ತಿಲ್ಲ ಅದು ನಿಜವಾಗಿದ್ದರೆ ಮೂರು ಡಿಸಿಎಂಗಳ ಪ್ರಶ್ನೆ ಉದ್ಭವಿಸದು ಎಂದರು. ಮಹಿಳೆಯೊಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ತೇಲಿಬರುತ್ತಿರುವ ಮಾತಿನ ಬಗ್ಗೆ ಸಚಿವರು, ಯಾಕಾಗಬಾರದು? ಅಂತ ಕೇಳಿದರು. ರಾಜಕೀಯ ಒಂದು ಸಂಘಃರ್ಷ, ಇಲ್ಲಿ ಅಧಿಕಾರ ಇರೋನು ಅದನ್ನು ಉಳಿಸಿಕೊಳ್ಳಲು ಸಂಘರ್ಷ ನಡೆಸುತ್ತಾನೆ ಮತ್ತು ಇಲ್ಲದವನು ಪಡೆಯಲು ಹೋರಾಡುತ್ತಾನೆ ಎಂದು ರಾಜಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ