ಲೋಕ ಸಭಾ ಚುನಾವಣೆಗೆ ಮೊದಲು 3 ಡಿಸಿಎಂಗಳನ್ನು ನೇಮಕ ಮಾಡುವಂತೆ ಸೋನಿಯಾ ಗಾಂಧಿಗೆ ಸಚಿವ ಕೆಎನ್ ರಾಜಣ್ಣ ಪತ್ರ!
ಅವರಿಗೆ ಹಾಗೆ ಅನಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಅವರು ಮೊದಲು ವಿಷಯವನ್ನು ಸ್ಥಳೀಯ ನಾಯಕರೊಂದಿಗೆ ಚರ್ಚಿಸಬೇಕು ತಾನೇ? ಕೆಪಿಸಿಸಿ ಅಧ್ಯಕ್ಷ ಕಾರ್ಯಕಾರಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರೊಂದಿಗೆ ಮೊದಲು ಚರ್ಚಿಸಬೇಡವೇ?
ತುಮಕೂರು: ಜನರು ಕೊಟ್ಟಿರುವ ಅಧಿಕಾರವನ್ನು ಒಪ್ಪವಾಗಿ ನಡೆಸಿಕೊಂಡು ಹೋಗುವುದು ಕಾಂಗ್ರೆಸ್ ಮಂತ್ರಿಗಳಿಗೆ, ಶಾಸಕರಿಗೆ ಇಷ್ಟವಿಲ್ಲ ಅನಿಸುತ್ತದೆ. ತಮ್ಮ ತಮ್ಮಲ್ಲೇ ವಿರಸ, ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುವಂಥ ಸ್ಥಿತಿಯನ್ನು ನಿರ್ಮಿಸಿಕೊಳ್ಳುವ ಕೆಲಸಗಳು ಸರ್ಕಾರ ರಚನೆಯಾದಾಗಿನಿಂದ ನಡೆಯುತ್ತಿವೆ. ಬಿಆರ್ ಪಾಟೀಲ್, ಬಸವರಾಜ ರಾಯರೆಡ್ಡಿ ಮತ್ತು ಈಗ ಕೆಎನ್ ರಾಜಣ್ಣ (KN Rajanna)-ತಮ್ಮ ವರ್ತನೆಗಳಿಂದ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ. ಸಹಕಾರ ಸಚಿವ ರಾಜಣ್ಣಗೆ ಲೋಕ ಸಭೆ ಚುನಾವಣೆಗೆ ಮೊದಲು ಪರಿಶಿಷ್ಟ ಪಂಗಡ-ಜಾತಿ, ಅಲ್ಪ ಸಂಖ್ಯಾತ ಸಮುದಾಯ ಮತ್ತು ವೀರಶೈವ ಸುಮುದಾಯದಿಂದ ಒಬ್ಬೊಬ್ಬರನ್ನು ಅರಿಸಿ ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತದೆ ಅಂತ ಅನಿಸಿದೆಯಂತೆ ಮತ್ತು ಹಾಗೆ ಒಂದು ಪತ್ರವನ್ನು ಸಹ ಸೋನಿಯಾ ಗಾಂಧಿಗೆ (Sonia Gandhi) ಬರೆಯಲಿದ್ದಾರಂತೆ. ಅವರಿಗೆ ಹಾಗೆ ಅನಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಅವರು ಮೊದಲು ವಿಷಯವನ್ನು ಸ್ಥಳೀಯ ನಾಯಕರೊಂದಿಗೆ ಚರ್ಚಿಸಬೇಕು ತಾನೇ? ಕೆಪಿಸಿಸಿ ಅಧ್ಯಕ್ಷ (KPCC president), ಕಾರ್ಯಕಾರಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರೊಂದಿಗೆ ಮೊದಲು ಚರ್ಚಿಸಬೇಡವೇ?
ಅದು ಹೋಗಲಿ, ಪತ್ರವಾದರೂ ಯಾರಿಗೆ ಬರೆಯಲಿದ್ದಾರೆ? ಸೋನಿಯಾ ಗಾಂಧಿಗೆ! ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತ ರಾಜಣ್ಣಗೆ ಗೊತ್ತಿಲ್ಲವೇ? ನಿನ್ನೆ ಬೆಂಗಳೂರಲ್ಲಿ ರಾಜಣ್ಣರ ಪ್ರಸ್ತಾಪವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಪತ್ರಕರ್ತರು ತಿಳಿಸಿದಾಗ ಅವರು ಪ್ರತಿಕ್ರಿಯೆ ಕೂಡ ನೀಡದೆ ಭುಸುಗುಡುತ್ತಾ ಹೋದರು. ರಾಜಣ್ಣಗೆ ಇದೆಲ್ಲ ಬೇಕಿತ್ತಾ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ