AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಬಗ್ಗೆ ವಿನಯ್ ಗುರೂಜಿ ಜೊತೆ ಗೋವಿಂದ ಬಾಬು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಬಯಲು!

ಚೈತ್ರಾ ಕುಂದಾಪುರ ಬಗ್ಗೆ ವಿನಯ್ ಗುರೂಜಿ ಜೊತೆ ಗೋವಿಂದ ಬಾಬು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಬಯಲು!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 16, 2023 | 12:36 PM

ಗೋವಿಂದ ಬಾಬು ಹೇಳುತ್ತಿರುವ ‘ಅವರು’ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟವಾಗುತ್ತದೆ. ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಗಣ್ಯರೊಬ್ಬರ ಹೆಸರು ಬಳಸಿದ್ದಾಳೆ ಮತ್ತು ವಿಚಾರಣೆ ಸಮಯದಲ್ಲಿ ಗೋವಿಂದ ಗಣ್ಯರ ಹೆಸರನ್ನು ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ.

ಚಿಕ್ಕಮಗಳೂರು: ಚೈತ್ರಾ ಕುಂದಾಪರ ವಂಚನೆ ಪ್ರಕರಣದಲ್ಲಿ (Chaitra Kundapura fraud case) ಚಿಕ್ಕಮಗಳೂರು ಜಿಲ್ಲೆಯ ಪ್ರಸ್ತಾಪ ಜಾಸ್ತಿಯಾಗುತ್ತಿದೆ. ಇಲ್ಲೊಂದು ಬಹಿರಂಗಗೊಡಿರುವ ಆಡಿಯೋ ಕ್ಲಿಪ್ಪಿಂಗ್ ಇದೆ. ಚೈತ್ರಾಳಿಂದ ವಂಚನೆಗೊಳಗಾಗಿರುವ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ಮತ್ತು ವಿನಯ್ ಗುರೂಜಿ ಗೌರಿಗದ್ದೆ (Vinay Guriju Gowrigadde) ನಡುವೆ ನಡೆದಿರುವ ಸಂಬಾಷಣೆ ಇದು. ಅಸಲಿಗೆ ಇದು ಕೇವಲ 10-12 ಸೆಕೆಂಡುಗಳ ವಿಡಿಯೋ. ಗೋವಿಂದ ಬಾಬು, ಚೈತ್ರಾಗೆ (ಅಥವಾ ಚೈತ್ರಾ ಬಗ್ಗೆ) ಜಾಗ್ರತೆಯಿಂದ ಇರಲು ತಿಳಿಸುವಂತೆ ಗುರೂಜಿಗೆ ಹೇಳುತ್ತಿದ್ದಾರೆ. ‘ಅವರ’ ಹೆಸರಲ್ಲಿ ಬೇರೆಯವರಿಗೂ ಮೋಸ ಮಾಡಬಹುದು, ನನಗಂತೂ ಬಹಳ ದೊಡ್ಡ ಮೋಸ ಮಾಡಿದ್ದಾಳೆ ಎಂದು ಅವರು ಗುರೂಜಿಗೆ ಹೇಳುತ್ತಿದ್ದಾರೆ. ಗೋವಿಂದ ಬಾಬು ಹೇಳುತ್ತಿರುವ ‘ಅವರು’ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟವಾಗುತ್ತದೆ. ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಗಣ್ಯರೊಬ್ಬರ ಹೆಸರು ಬಳಸಿದ್ದಾಳೆ ಮತ್ತು ವಿಚಾರಣೆ ಸಮಯದಲ್ಲಿ ಗೋವಿಂದ ಗಣ್ಯರ ಹೆಸರನ್ನು ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ. ಗೋವಿಂದ ಬಾಬು ಹೇಳೋದನ್ನು ಕೇಳಿದರೆ, ಪ್ರಕರಣದಲ್ಲಿ ಗಣ್ಯರ ಪಾಲೇನೂ ಇಲ್ಲ, ಚೈತ್ರಾ ಜನರನ್ನು ವಂಚಿಸಲು ಅವರ ಹೆಸರು ಬಳಿಸಿಕೊಂಡಿದ್ದಾಳೆ, ಅಂತ ಸ್ಪಷ್ಟವಾಗುತ್ತದೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ