Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಮತ್ತು ಗೋವಿಂದ ಬಾಬು ಆಪ್ತ ಪ್ರಸಾದ್ ನಡುವೆ ನಡೆದ ಸಂಭಾಷಣೆಯ ಆಡಿಯೋ ಬಹಿರಂಗ

ಚೈತ್ರಾ ಕುಂದಾಪುರ ಮತ್ತು ಗೋವಿಂದ ಬಾಬು ಆಪ್ತ ಪ್ರಸಾದ್ ನಡುವೆ ನಡೆದ ಸಂಭಾಷಣೆಯ ಆಡಿಯೋ ಬಹಿರಂಗ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 16, 2023 | 10:40 AM

ಯಾರೋ ಇಬ್ಬರು ಹುಡುಗರು ಕಾರ್ಕಳ ರಸ್ತೆಯಲ್ಲಿ ಹೋಗಿತ್ತದ್ದರು ಅಂತ ಪ್ರಸಾದ್ ಹೇಳಿದಾಗ ಚೈತ್ರಾ ಸುನಿಲ್ ಕುಮಾರ್ ಮನೆಗೆ ಹೋಗಿರಬೇಕು ಅನ್ನುತ್ತಾಳೆ. ಅದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರೋ ಅಥವಾ ಬೇರೆ ಸುನೀಲ್ ಕುಮಾರೋ ಅಂತ ಗೊತ್ತಾಗಲ್ಲ. ಹೆಸರು ಹೇಳಿದ ಮಾತ್ರಕ್ಕೆ ಪ್ರಕರಣದಲ್ಲಿ ಶಾಸಕರನ್ನು ಎಳೆತರೋದು ಸರಿ ಕೂಡ ಅಲ್ಲ.

ಬೆಂಗಳೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನು (Govind Babu Pujari) ನಂಬಿಸಿ ಸುಮಾರು ರೂ. 5 ಕೋಟಿ ವಂಚಿಸಿರುವ ಅರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ವಿಚಾರಣೆ ಸಮಯದಲ್ಲಿ ಅರೋಗ್ಯದಲ್ಲಿ ಏರುಪೇರಾಗಿ ಅಸ್ಪತ್ರೆ ಸೇರಿರುವ ಚೈತ್ರಾ ಕುಂದಾಪುರ (Chaitra Kundapura) ಎಸಗಿರುವ ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಅವಳ ಮತ್ತು ಗೋವಿಂದ ಪೂಜಾರಿಯ ಆಪ್ತ ಪ್ರಸಾದ್ (Prasad) ಹೆಸರಿನ ವ್ಯಕ್ತಿಯ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆ ಬಹಿರಂಗಗೊಂಡಿದೆ. ಇದರಲ್ಲಿ ಪ್ರಸಾದ್ ಚೈತ್ರಾಗೆ ಮುಟ್ಟಿಸಿದೆ ಅಂತ ಹೇಳುತ್ತಾನೆ. ಏನು ಮುಟ್ಟಿಸಿದೆ, ಯಾರಿಗೆ ಮುಟ್ಟಿಸಿದೆ ಅಂತ ಆತ ಹೇಳಲ್ಲ. ಸಂಭಾಷಣೆಯಲ್ಲಿ ಚೈತ್ರಾ, ಸುನೀಲ್ ಕುಮಾರ್ ಹೆಸರು ಪ್ರಸ್ತಾಪ ಮಾಡುತ್ತಾಳೆ. ಯಾರೋ ಇಬ್ಬರು ಹುಡುಗರು ಕಾರ್ಕಳ ರಸ್ತೆಯಲ್ಲಿ ಹೋಗಿತ್ತದ್ದರು ಅಂತ ಪ್ರಸಾದ್ ಹೇಳಿದಾಗ ಚೈತ್ರಾ ಸುನೀಲ್ ಕುಮಾರ್ ಮನೆಗೆ ಹೋಗಿರಬೇಕು ಅನ್ನುತ್ತಾಳೆ. ಅದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರೋ ಅಥವಾ ಬೇರೆ ಸುನೀಲ್ ಕುಮಾರೋ ಅಂತ ಗೊತ್ತಾಗಲ್ಲ. ಹೆಸರು ಹೇಳಿದ ಮಾತ್ರಕ್ಕೆ ಪ್ರಕರಣದಲ್ಲಿ ಶಾಸಕರನ್ನು ಎಳೆತರೋದು ಸರಿ ಕೂಡ ಅಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ