ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಾಮೀಜಿ ಬೆಂಗಳೂರಲ್ಲಿ ಖರೀದಿಸಿದ್ದ ಮನೆ ಮಾರಿ ಪರಾರಿಯಾಗಿದ್ದಾರೆ!

ವಂಚನೆ ಪ್ರಕರಣದಲ್ಲಿ ಸ್ವಾಮೀಜಿಗೆ ರೂ. 1.5 ಕೋಟಿ ಸಂದಾಯವಾಗಿದೆ ಅಂತ ಹೇಳಲಾಗುತ್ತಿದೆ. ಚೈತ್ರಾಳ ಬಂಧನವಾಗುತ್ತಿದ್ದಂತೆಯೇ, ಸ್ವಾಮೀಜಿ ಮನೆಯನ್ನು ಮಾರಾಟ ಮಾಡಿ ತಲೆಮರೆಸಿಕೊಂಡಿದ್ದಾರೆ. ಸಿಸಿಬಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾದ ಸಂಶಯ ಸ್ವಾಮೀಜಿಗಿತ್ತು ಅನ್ನೋದು ಅವರ ವರ್ತನೆಯಿಂದ ವಿದಿತವಾಗುತ್ತದೆ.

ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಾಮೀಜಿ ಬೆಂಗಳೂರಲ್ಲಿ ಖರೀದಿಸಿದ್ದ ಮನೆ ಮಾರಿ ಪರಾರಿಯಾಗಿದ್ದಾರೆ!
|

Updated on: Sep 16, 2023 | 11:33 AM

ಬೆಂಗಳೂರು: ಎಲ್ಲ ಪ್ರಾಪಂಚಿಕ ಭೋಗಗಳನ್ನು ತ್ಯಜಿಸಿ; ಮಠಗಳ ಶ್ರೀಗಳಾಗುವ ಸ್ವಾಮೀಜಿಗಳಿಗೆ ಅದ್ಯಾಕೆ ಹಣ-ಆಸ್ತಿ-ಪಾಸ್ತಿಯ ಮೇಲೆ ಈ ಪಾಟಿ ಮೋಹ ಹುಟ್ಟಿಕೊಳ್ಳುತ್ತದೆ ಅಂತ ಅರ್ಥವಾಗದು ಮಾರಾಯ್ರೇ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ತೋರಿಸುತ್ತಿರುವ ಈ ಮನೆಯನ್ನು ನೋಡಿ. ಇದು ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಕ್ಕೆ ಸೇರಿದ ಮನೆ ಅಂತ ಹೊರಗೊಂದು ಬೋರ್ಡ್ ಇಟ್ಟಿದ್ದಾರೆ. ಅಸಲಿಗೆ ಮನೆಯನ್ನು ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪ್ರಕಕರಣದಲ್ಲಿ ಅರೋಪಿಗಳಲ್ಲಿ ಒಬ್ಬರಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ (Abhinava Halashri Swamiji) ಒಬ್ಬ ವಯಸ್ಸಾದ ಮಹಿಳೆಯಿಂದ (elderly woman) ಖರೀದಿಸಿದ್ದು. ವಂಚನೆ ಪ್ರಕರಣದಲ್ಲಿ ಸ್ವಾಮೀಜಿಗೆ ರೂ. 1.5 ಕೋಟಿ ಸಂದಾಯವಾಗಿದೆ ಅಂತ ಹೇಳಲಾಗುತ್ತಿದೆ. ಓಕೆ, ಚೈತ್ರಾಳ ಬಂಧನವಾಗುತ್ತಿದ್ದಂತೆಯೇ, ಸ್ವಾಮೀಜಿ ಮನೆಯನ್ನು ಮಾರಾಟ ಮಾಡಿ ತಲೆಮರೆಸಿಕೊಂಡಿದ್ದಾರೆ. ಸಿಸಿಬಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾದ ಸಂಶಯ ಸ್ವಾಮೀಜಿಗಿತ್ತು ಅನ್ನೋದು ಅವರ ವರ್ತನೆಯಿಂದ ವಿದಿತವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us