ಸಂಶಯ ಬರದಂತೆ ನಂಬಿಸಿದ್ದರು: ಚೈತ್ರಾ ಕುಂದಾಪುರ ಸೇರಿ ಆರೋಪಿಗಳ ವಿರುದ್ದ ಉದ್ಯಮಿ ಗೋವಿಂದಬಾಬು ಪೂಜಾರಿ ಆರೋಪ
ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ, ಯಾವುದೇ ರೀತಿಯಲ್ಲೂ ಸಂಶಯ ಬರದಂತೆ ನಂಬಿಸಿದ್ದರು ಎಂದು ಸಿಸಿಬಿ ವಿಚಾರಣೆ ಬಳಿಕ ಚೈತ್ರಾ ಕುಂದಾಪುರ ಸೇರಿ ಆರೋಪಿಗಳ ವಿರುದ್ದ ಉದ್ಯಮಿ ಗೋವಿಂದಬಾಬು ಪೂಜಾರಿ ಆರೋಪಿಸಿದ್ದಾರೆ.
ಬೆಂಗಳೂರು, ಸೆ.14: ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವವರಿಗೆ ಬೈಂದೂರು (Byndur) ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿಯನ್ನು ಚೈತ್ರಾ ಕುಂದಾಪುರ (Chaitra Kundapur) ಸೇರಿದಂತೆ ಅವರ ಗ್ಯಾಂಗ್ ವಂಚನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾತನಾಡಿದ ಉದ್ಯಮಿ ಗೋವಿಂದಬಾಬು ಪೂಜಾರಿ ‘ನಾನು ಉದ್ಯಮಿ, ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನನಗೆ ಯಾವುದೇ ರೀತಿಯಲ್ಲೂ ಸಂಶಯ ಬರದಂತೆ ನಂಬಿಸಿದ್ದರು. ನಾನು ಉದ್ಯಮ ಕ್ಷೇತ್ರ, ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಿಸಿಬಿ ಕಚೇರಿ ಬಳಿ ಮಾತನಾಡಿದ ಉದ್ಯಮಿ ಗೋವಿಂದಬಾಬು ಪೂಜಾರಿ ‘ಸಿಸಿಬಿ ಅಧಿಕಾರಿಗಳು ಏನೆಲ್ಲ ಕೇಳಿದ್ದಾರೋ ಅದನ್ನೆಲ್ಲ ಕೊಟ್ಟಿದ್ದೇನೆ. ಪೆನ್ಡ್ರೈವ್ನಲ್ಲಿ ಸಿಸಿಬಿ ಪೊಲೀಸರಿಗೆ ದಾಖಲೆಗಳನ್ನು ಕೊಟ್ಟಿದ್ದೇನೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಾಗಿ ಹೇಳುವುದಿಲ್ಲ. ನನ್ನ ಬಳಿ ಹಣ ಹಿಂದಿರುಗಿಸುವುದಾಗಿ ಸಮಯ ತೆಗೆದುಕೊಂಡಿದ್ದ ಆರೋಪಿಗಳು, ಹಣ ಕೊಡುವುದು ಲೇಟ್ ಆಗಿದ್ದರಿಂದ ನಾನು ಪೊಲೀಸರಿಗೆ ದೂರು ನೀಡಿದ್ದು, ನನಗೆ ಮೋಸ ಮಾಡಿದಂತೆ ಬೇರೆಯವರಿಗೆ ಆಗಬಾರದೆಂದು ದೂರು ನೀಡಿದ್ದೇನೆ ಎಂದು ಸಿಸಿಬಿ ವಿಚಾರಣೆ ನಂತರ ಉದ್ಯಮಿ ಗೋವಿಂದಬಾಬು ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ; ಇಲ್ಲಿದೆ ವಿವರ
ಬಡತನದಲ್ಲಿ ಬೆಳೆದು ಸ್ವಂತ ಹೋಟೆಲ್ ಸ್ಥಾಪಿಸಿದ ಉದ್ಯಮಿ
ಬೈಂದೂರು ತಾಲೂಕಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬಡತನದಲ್ಲಿ ಬೆಳೆದು ಬಂದು ಹೋಟೆಲ್ನಲ್ಲಿ ಕೆಲಸ ಮಾಡಿ, ಇದೀಗ ಸ್ವಂತ ಹೋಟೆಲ್ ಸ್ಥಾಪಿಸಿ. ಶಿಫ್ ಟಾಪ್ ಎಂಬ ಕಿಚನ್ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು, ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾಜಸೇವೆ, ಧಾರ್ಮಿಕ, ಶೈಕ್ಷಣಿಕ ಸಹಕಾರವನ್ನು ಮಾಡುತ್ತಾ ಬೈಂದೂರಿನಲ್ಲಿ ಓಡಾಡಿಕೊಂಡಿದ್ದರು.
ಇದೇ ಸಮಯದಲ್ಲಿ ರಾಷ್ಟ್ರೀಯತೆ ದೇಶ, ಧರ್ಮ, ಜಾತಿ, ನೀತಿ ಎಂದು ರಾಜ್ಯಾದ್ಯಂತ ಭಾಷಣ ಮಾಡಿಕೊಂಡಿದ್ದ ಚೈತ್ರಾ ಬೈಂದೂರಿನ ಟಿಕೆಟ್ ಡೀಲ್ಗೆ ಇಳಿದಿದ್ದಳು. ತಾನೊಂದು ಟೀಮ್ ಕಟ್ಟಿಕೊಂಡು ಗೋವಿಂದಬಾಬು ಪೂಜಾರಿ ಅವರನ್ನು ಸಂಪರ್ಕ ಮಾಡಿ ಬಿಜೆಪಿ, ಆರ್.ಎಸ್. ಎಸ್ ಸಂಘ, ರಾಷ್ಟ್ರದ ನಾಯಕರು ಪರಿಚಯ ಎಂದು ಕನಸಿನ ಗೋಪುರ ಕಟ್ಟಿಸಿದ್ದಾಳೆ. ಎಲ್ಲವನ್ನೂ ನಂಬಿದ ಗೋವಿಂದ ಬಾಬು ಪೂಜಾರಿ ಹಂತ ಹಂತವಾಗಿ ಐದೂವರೆ ಕೋಟಿ ರೂಪಾಯಿ ನೀಡಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ