ಹಳೆ ವಾಹನಗಳನ್ನ ಗುಜುರಿಗೆ ಹಾಕಲು ಆರ್​​ಟಿಒನಿಂದ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆ

ಹಳೆ ವಾಹನಗಳನ್ನ ಗುಜುರಿಗೆ ಹಾಕಲು ಆರ್​​ಟಿಒನಿಂದ ಸ್ಕ್ರಾಪಿಂಗ್​ ಕೇಂದ್ರ ಸ್ಥಾಪನೆ ಮುಂದಾಗಿದ್ದು, M/s Mahindra M5TC Recycling Pvt Ltd, ವಿಜಯಪುರ, ದೇವನಹಳ್ಳಿ ಇವರಿಗೆ ಮೊಟ್ಟ ಮೊದಲ ಸ್ಕ್ರಾಪಿಂಗ್ ಕೇಂದ್ರವನ್ನು ಸ್ಥಾಪಿಸಲು ಇಂದಿನಿಂದ ಜಾರಿಗೆ ಬರುವಂತೆ ಆರ್​​ಟಿಒ ನೋಂದಣಿ ಪತ್ರ ನೀಡಿದೆ.

ಹಳೆ ವಾಹನಗಳನ್ನ ಗುಜುರಿಗೆ ಹಾಕಲು ಆರ್​​ಟಿಒನಿಂದ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2023 | 9:15 PM

ಬೆಂಗಳೂರು, ಸೆಪ್ಟೆಂಬರ್​ 14: ಹಳೆ ವಾಹನಗಳನ್ನ ಗುಜುರಿಗೆ ಹಾಕಲು ಆರ್​​ಟಿಒನಿಂದ ಸ್ಕ್ರ್ಯಾಪಿಂಗ್ (Vehicle Scrap) ಕೇಂದ್ರ ಸ್ಥಾಪನೆ ಮುಂದಾಗಿದ್ದು, M/s Mahindra M5TC Recycling Pvt Ltd, ವಿಜಯಪುರ, ದೇವನಹಳ್ಳಿ ಇವರಿಗೆ ಮೊಟ್ಟ ಮೊದಲ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಸ್ಥಾಪಿಸಲು ಇಂದಿನಿಂದ ಜಾರಿಗೆ ಬರುವಂತೆ ಆರ್​​ಟಿಒ ನೋಂದಣಿ ಪತ್ರ ನೀಡಿದೆ.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದನ್ವಯ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ  ಡಿಸೆಂಬರ್ 30, 2022ರಲ್ಲಿ ಜಾರಿಗೊಳಿಸಿದ್ದು, ಸಾರಿಗೆ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು.

ಇದನ್ನೂ ಓದಿ: ಚೀನಾದ ಕೀಪ್ ಶೇರರ್ ಮೊಬೈಲ್​ ಆ್ಯಪ್​ ಮೂಲಕ ವಂಚನೆ: 6. 71 ಕೋಟಿ ರೂ. ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

M/s Mahindra MSTC Recycling Pvt. Ltd, ವಿಜಯಪುರ, ದೇವನಹಳ್ಳಿ ತಾಲೂಕು ಇವರಿಗೆ ಮೊಟ್ಟ ಮೊದಲನೇ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸಲು ಸೆಪ್ಟೆಂಬರ್​​​ 14, 2023 ರಿಂದ ಜಾರಿಗೆ ಬರುವಂತೆ ನೋಂದಣಿ ಪುಮಾಣ ಪತ್ರವನ್ನು ನೀಡಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಹಳೆಯ ಅನರ್ಹ ವಾಹನಗಳನ್ನು ಸ್ವಯಂ ಪ್ರೇರಿತರಾಗಿ ನಾಶಪಡಿಸಲು ಈ ಕೇಂದ್ರದ ಉಪಯೋಗ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿ ಹೊರಬಂದ ಗೋವಿಂದ ಬಾಬು ಮಾಧ್ಯಮದವರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹೊಸ ನೀತಿ ಪ್ರಕಾರ ಈ ಕೇಂದ್ರವನ್ನು ಆರಂಭಿಸಲಾಗಿದೆ. 15 ವರ್ಷಕ್ಕಿಂತ ಹಳೆಯದಾದ, ಅನರ್ಹ ವಾಹನಗಳನ್ನು ಹಾಗೂ ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ನೋಂದಾಯಿತ ವಾಹನ ಗುಜರಿ ಕೇಂದ್ರಕ್ಕೆ ತಂದು ಸ್ಕ್ರ್ಯಾಪಿಂಗ್ ಮಾಡಬಹುದಾಗಿದೆ. 15 ವರ್ಷ ಓಡಿರುವ ಎಲ್ಲ ಸರ್ಕಾರಿ ವಾಹಗಳನ್ನು ಸ್ಕ್ರ್ಯಾಪಿಂಗ್​ ಹಾಕಬೇಕು.

ಭಾರತದಾದ್ಯಂತ ಸುಮಾರು 60 ಆರ್‌ವಿಎಸ್‌ಎಫ್‌ಗಳಿವೆ. ಆದರೆ, ಕರ್ನಾಟಕದಲ್ಲಿ ಯಾವುದೂ ಇಲ್ಲ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.