ಚೀನಾದ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ವಂಚನೆ: 6. 71 ಕೋಟಿ ರೂ. ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
ಭಾರತೀಯರನ್ನೇ ವ್ಯವಸ್ಥಾಪಕರು, ಟೆಲಿಕಾಲರ್, ಸಿಬ್ಬಂದಿಯಾಗಿ ನೇಮಿಸಿ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ಚೀನಿಯರು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ಚೀನಿಯರಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಅಡಿ 6.71 ಕೋಟಿ ರೂ. ಹಣ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಬೆಂಗಳೂರು, ಸೆಪ್ಟೆಂಬರ್ 14: ಚೀನಾದ ಕೀಪ್ ಶೇರರ್ (Keep Sharer) ಮೊಬೈಲ್ ಆ್ಯಪ್ ಮೂಲಕ ಚೀನಿಯರಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಅಡಿ 6.71 ಕೋಟಿ ರೂ. ಹಣ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಕ್ರಿಪ್ಟೋ ಕರೆನ್ಸಿ ರೂಪದಲ್ಲಿ 71.3 ಲಕ್ಷ ಕರೆನ್ಸಿ ಜಪ್ತಿ ಮಾಡಿರುವ ಇಡಿ, 12 ಘಟಕಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ದಕ್ಷಿಣ CEN ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯರನ್ನೇ ವ್ಯವಸ್ಥಾಪಕರು, ಟೆಲಿಕಾಲರ್, ಸಿಬ್ಬಂದಿಯಾಗಿ ನೇಮಿಸಿ ಕೀಪ್ ಶೇರರ್ ಮೊಬೈಲ್ ಆ್ಯಪ್ ಮೂಲಕ ಚೀನಿಯರು ವಂಚಿಸುತ್ತಿದ್ದರು. ಚೀನಾ ಮೂಲದ 6 ಕಂಪನಿಗಳ 9 ಆರೋಪಿಗಳು ವಂಚನೆಯಲ್ಲಿ ಭಾಗಿಯಾಗಿದ್ದರು.
ಟೆಲಿಗ್ರಾಂನಲ್ಲಿ ವಂಚನೆ, ಹಣದಾಸೆಗೆ ಬಿದ್ದವರು ಜಸ್ಟ್ ಮಿಸ್
ಬೆಳಗಾವಿ: ಆನ್ ಲೈನ್ನಲ್ಲಿ ಇತ್ತಿಚೇಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಓಟಿಪಿ ಪಡೆದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡವರೂ ಇದ್ದಾರೆ. ಇಂತಹ ಪ್ರಕರಣಗಳನ್ನ ಬೇಧಿಸಿ ಪೊಲೀಸರು ಜೈಲಿಗಟ್ಟಿದ್ದು ಇದೆ. ಆದರೆ ಈ ಓಟಿಪಿ ರೂಟ್ ಬಿಟ್ಟು ಬೇರೆ ಮಾರ್ಗದಲ್ಲಿಳಿದಿರುವ ಆನ್ ಲೈನ್ ವಂಚಕರು ಜನರಿಗೆ ಟೋಪಿ ಹಾಕುವುದನ್ನ ಮುಂದುವರೆಸಿದ್ದಾರೆ. ಇದೇ ರೀತಿ ಬೆಳಗಾವಿಯಲ್ಲಿ ಇಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಲು ಯತ್ನಿಸಿರುವಂತಹ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಆನ್ಲೈನ್ನಲ್ಲಿ ಲೋನ್ ಪಡೆಯುವ ಮುನ್ನ ಹುಷಾರ್! ಲೋನ್ ಕಟ್ಟಿಲ್ಲವೆಂದು ಟಾರ್ಚರ್, ನೇಣಿಗೆ ಶರಣಾದ ವಿದ್ಯಾರ್ಥಿ
ಟೆಲಿಗ್ರಾಂ ಆ್ಯಪ್ನಲ್ಲಿ ಹಲವು ಕಂಪನಿ ಹೆಸರು ಹೇಳಿಕೊಂಡು ಮೆಸೇಜ್ ಮಾಡುವ ಖದೀಮರು ಕ್ರಮೇಣ ಸಲುಗೆ ಬೆಳಸುತ್ತಾರೆ. ಆರಂಭದಲ್ಲಿ ಐದು ಸಾವಿರ ಹಣ ಕಟ್ಟಿಸಿಕೊಂಡು ಅದಕ್ಕೆ ಹತ್ತು ಸಾವಿರ ಕೊಡುತ್ತಾರೆ ಬಳಿಕ ಹತ್ತು ಸಾವಿರಕ್ಕೆ ಇಪ್ಪತ್ತು ಸಾವಿರ ಹಣ ಹಾಕ್ತಾರೆ. ಹೀಗೆ ಕೊಟ್ಟ ಹಣಕ್ಕೆ ಒಂದು ಪಟ್ಟು ಹಣ ವಾಪಾಸ್ ಕೊಡ್ತಾ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಹಣ ಹಾಕಿಸಿಕೊಳ್ತಾರೆ. ಹೀಗೆ ಅವರ ಅಕೌಂಟಿಗೆ ಹಣ ಹಾಕಿದ ಬಳಿಕ ಡ್ರಾ ಮಾಡಬೇಡಿ ಹೆಚ್ಚು ಹಣ ಇಟ್ಟರೆ ಇನ್ನೂ ಹೆಚ್ಚು ದುಡ್ಡ ಬರುತ್ತೆ ಅಂತಾ ಹೇಳಿ ನಂಬಿಸಿ ಬಳಿಕ ಮೊಬೈಲ್ ನಂಬರ್ ಬದಲಿಸುತ್ತಾರೆ.
ಹೀಗೆ ಬೆಳಗಾವಿ ಜಿಲ್ಲೆಯ ರಾಯಬಾಗ ನಿವಾಸಿ ಡಾ.ಶಿಲ್ಪಾ ಶಿರಗಣ್ಣವರ್ ಅವರಿಂದ 27ಲಕ್ಷ 74 ಸಾವಿರ ರೂ. ಮತ್ತು ನಿಪ್ಪಾಣಿ ನಿವಾಸಿ ಆಶಾ ಕೋಟಿವಾಲೆಗೆ 18 ಲಕ್ಷ 41 ಸಾವಿರ ರೂ. ವಂಚನೆ ಮಾಡಿದ್ದರು. ಕೇಳಿ ಕೇಳಿದಾಗ ಹಣ ಹಾಕಿ ದೊಡ್ಡ ಮೊತ್ತದ ಹಣವಾದ ಬಳಿಕ ನಂಬರ್ ಬದಲಿಸಿದ್ದಾರೆ. ಅವರು ಸಂಪರ್ಕಕ್ಕೆ ಸಿಗದಿದ್ದಾಗ ತಾವು ವಂಚನೆ ಒಳಗಾಗಿದ್ದೇವೆ ಅಂತಾ ಅಂದುಕೊಂಡು ಕೂಡಲೇ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.
ಇದನ್ನೂ ಓದಿ: Mangaluru News: ಚೀನಾದ ಆ್ಯಪ್‌ಗಳಿಂದ ಸಾಲ ಪಡೆಯಬೇಡಿ; ಮಂಗಳೂರು ಪೊಲೀಸ್ ಆಯುಕ್ತರಿಂದ ಎಚ್ಚರಿಕೆ
ಕೇಸ್ ದಾಖಲಿಸಿಕೊಂಡಿದ್ದ ಸಿಇಎನ್ ಪೊಲೀಸರು ಕೂಡಲೇ ಅಲರ್ಟ್ ಆಗಿ ಇಬ್ಬರು ಮಹಿಳೆಯರು ಹಣ ಹಾಕಿದ ಅಕೌಂಟ್ ನಂಬರ್ಗಳನ್ನ ಪಡೆದುಕೊಂಡಿದ್ದರು. ತಕ್ಷಣ ಆ ಎಲ್ಲ ಅಕೌಂಟ್ ನಂಬರ್ಗಳನ್ನ ಪ್ರೀಜ್ ಮಾಡಿದ್ದಾರೆ. ಹೀಗೆ ಪ್ರೀಜ್ ಮಾಡಿದ ಅಕೌಂಟ್ ಗಳಲ್ಲಿ ಬರೋಬ್ಬರಿ 72ಲಕ್ಷ 50 ಸಾವಿರ ರೂ. ಹಣ ಇರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ವಂಚನೆಗೊಳಗಾಗಿದ್ದ ಮಹಿಳೆಯರಿಗೆ ಸೇರಬೇಕಾದ 46 ಲಕ್ಷ ರೂ. ಹಣವನ್ನ ವಾಪಾಸ್ ಮಾಡಿದ್ದರು.
ಬೆಳಗಾವಿಯ 3ನೇ ಜೆಎಂಎಫ್ ಸಿ ಕೋರ್ಟ್ ನಿಂದ ಹಣ ಕಳೆದುಕೊಂಡಿದ್ದ ಮಹಿಳೆಯರಿಗೆ ನೀಡುವುದರಲ್ಲಿ ಯಶಸ್ವಿಯಾಗಿದ್ದರು. ತನಿಖೆ ವೇಳೆ ಎರಡೇ ಪ್ರಕರಣದಲ್ಲಿ ಖದೀಮರು ಬರೋಬ್ಬರಿ 21 ಖಾತೆ ಬಳಕೆ ಮಾಡಿರುವುದು ಗೊತ್ತಾಗಿದ್ದು ಅದರಲ್ಲಿ 72 ಲಕ್ಷ 50 ಸಾವಿರ ರೂ. ಹಣವಿದ್ದು ಈ ಹಣ ಎಲ್ಲಿಂದ ಬಂತೂ ಅನ್ನೋದನ್ನ ಕೂಡ ಪತ್ತೆ ಹೆಚ್ಚುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.