ಶಾಲಾ ಬಾಲಕನ ಕಿಡ್ನಾಪ್​: ಅರ್ಧ ಗಂಟೆಯಲ್ಲೇ ಮಗುವಿನ ರಕ್ಷಣೆ ಮಾಡಿ, ಆರೋಪಿಗಳ ಬಂಧಿಸಿದ ಪೊಲೀಸರು

ಐದು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಕೂಡಲೇ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ಶ್ರೀನಿವಾಸಪುರ ಹಾಗೂ ಗಡಿಯ ಆಂದ್ರ ಪ್ರದೇಶದ ಪೊಲೀಸರನ್ನು ಅಪಹರಣ ಪ್ರಕರಣ ಕುರಿತು ಅಲರ್ಟ್​ ಮಾಡಲಾಗಿತ್ತು. ಇನ್ನು ಈ ವೇಳೆ ಅಪಹರಣಾಕಾರರು ಕಿಡ್ನಾಪ್​ ಮಾಡಿಕೊಂಡು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಮಾಹಿತಿ ಸಿಕ್ಕಿತ್ತು.

ಶಾಲಾ ಬಾಲಕನ ಕಿಡ್ನಾಪ್​: ಅರ್ಧ ಗಂಟೆಯಲ್ಲೇ ಮಗುವಿನ ರಕ್ಷಣೆ ಮಾಡಿ, ಆರೋಪಿಗಳ ಬಂಧಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 14, 2023 | 7:42 PM

ಕೋಲಾರ, ಸೆ.14: ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ (Kidnap) ಮಾಡಿದ ಆರೋಪಿಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಬಂಧಿಸಿ, ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೋಲಾರ (Kolar) ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವವರ ಮಗ ಯಶ್ವಿತ್ ಗೌಡನನ್ನು ಸಂಜೆ 5.30 ರ ಸುಮಾರಿಗೆ ಅಪಹರಣ ಮಾಡಲಾಗಿತ್ತು. ಶಾಲೆಯಿಂದ ಮನೆಗೆ ಬರುವ ವೇಳೆ, ಮನೆ ಬಳಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದರು.

ಸುಪಾರಿ ಕೊಟ್ಟು ಅಪಹರಣ ಮಾಡಲಾಗಿದೆ ಎಂಬ ಶಂಕೆ

ಹೌದು, ಸುಪಾರಿ ಕೊಟ್ಟು ಅಪಹರಣ ಮಾಡಲಾಗಿದೆ ಎನ್ನಲಾಗಿದ್ದು, ಇಟ್ಟಿಗೆ ಫ್ಯಾಕ್ಟರಿ ಹಾಗೂ ಎಕ್ಸಿಡಿ ಬ್ಯಾಟರಿ ಡೀಲರ್​ಶೀಪ್​ ಹೊಂದಿರುವ ತಂದೆ ಲೋಕೇಶ್​ರನ್ನು ಭೇದರಿಸುವ ನಿಟ್ಟಿನಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಕೂಡಲೇ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ಶ್ರೀನಿವಾಸಪುರ ಹಾಗೂ ಗಡಿಯ ಆಂದ್ರ ಪ್ರದೇಶದ ಪೊಲೀಸರನ್ನು ಅಪಹರಣ ಪ್ರಕರಣ ಕುರಿತು ಅಲರ್ಟ್​ ಮಾಡಲಾಗಿತ್ತು. ಇನ್ನು ಈ ವೇಳೆ ಅಪಹರಣಾಕಾರರು ಕಿಡ್ನಾಪ್​ ಮಾಡಿಕೊಂಡು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಮಾಹಿತಿ ಸಿಕ್ಕಿತ್ತು.

ಇದನ್ನೂ ಓದಿ:Viral Video: ಚಿಲಿ; ಹುಟ್ಟುತ್ತಿದ್ದಂತೆಯೇ ಅಪಹರಣಕ್ಕೊಳಗಾದ ಮಗ 42 ವರ್ಷಗಳ ನಂತರ ತಾಯಿಯನ್ನು ಭೇಟಿಯಾದ ಕ್ಷಣ

ಸಿನಿಮೀಯ ರೀತಿಯಲ್ಲಿ ಹೋಗಿ ಬಂಧನ

ಇನ್ನು ಖಚಿತ ಮಾಹಿತಿ ಮೇರೆಗೆ ಅಪಹರಣಕಾರರ ಬೆನ್ನುಬಿದ್ದ ಪೊಲೀಸರು, ತಕ್ಷಣ ಶ್ರೀನಿವಾಸಪುರ ಪೊಲೀಸರನ್ನು ಅಲರ್ಟ್​ ಮಾಡಿದ್ದಾರೆ. ನಂತರ ಶ್ರೀನಿವಾಸಪುರದ ಪಿಎಸ್​ಐ ಈಶ್ವರ್​, ಎಎಸ್​ಐ ಎಂ.ಡಿ.ನಾರಾಯಣಪ್ಪ, ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಸಿಪಿಐ ಲೋಕೇಶ್​ ಕುಮಾರ್​ ಎಲ್ಲರೂ ತಂಡ ತಂಡವಾಗಿ ಅಪಹರಣಕಾರರ ಬೆನ್ನು ಬಿದ್ದಿದ್ದರು. ಈ ವೇಳೆ ಅಪಹರಣಾಕಾರರು ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಬಳಿ ಹೋಗುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆ ಅಪಹರಣಾಕಾರರನ್ನು ಅಲ್ಲಿ ಬಂಧಿಸಲಾಗಿದೆ.

ಪೋಷಕರ ಮಡಿಲಿಗೆ ಮಗುವನ್ನು ಒಪ್ಪಿಸಿದ ಪೊಲೀಸರು

ಅಷ್ಟೇ ಅಲ್ಲದೆ ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದು, ಅಪಹರಣಕಾರರನ್ನು ಬಂಧಿಸಿ, ಅವರು ಅಪಹರಣಕ್ಕೆ ಬಳಸಿದ್ದ ಬೈಕ್​​ನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತ ಅಪಹರಣಾಕಾರರನ್ನು ಬೇತಮಂಗಲದ ವೆಂಕಟೇಶ್ ಹಾಗೂ ಅರಹಳ್ಳಿಯ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಸದ್ಯ ಅರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆರೋಪಿಗಳು ಕಿಡ್ನಾಪ್​ ಹಿಂದಿನ ಉದ್ದೇಶವೇನು? ಕಿಡ್ನಾಪ್​ ಹಿಂದೆ ಯಾರಿದ್ದಾರೆ ಎನ್ನುವ ಅಷ್ಟೂ ಮಾಹಿತಿ ಕಲೆ ಹಾಕಲಿದ್ದಾರೆ. ಸದ್ಯ ಮಿಂಚಿನ ಕಾರ್ಯಾಚರಣೆ ನಡೆಸಿದ ಕೋಲಾರ ಪೊಲೀಸರಿಗೆ ಯಶ್ವಿತ್ ಗೌಡ ಕುಟುಂಬಸ್ಥರು ಹಾಗೂ ಕೋಲಾರದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಪೊಲೀಸ್​ ಸಿಬ್ಬಂದಿಯ ಕಾರ್ಯವೈಕರಿಯನ್ನು ಕೋಲಾರ ಎಸ್ಪಿ ನಾರಾಯಣ್​ ಕೂಡಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Thu, 14 September 23

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ