ನೆಲಮಂಗಲ ಬಾಲಕಿ ಅಪಹರಣ ಪ್ರಕರಣ: ಕಿಡ್ನಾಪ್ ಅಲ್ಲ, ಅಲ್ಲಿ ನಡೆದದ್ದೇ ಬೇರೆ
ಪೋಲಿಸ್ ತನಿಖೆಯ ನಂತರ ಇದು ಕಿಡ್ನಾಪ್ ಪ್ರಕರಣವಲ್ಲ ಎಂಬುವುದು ಬೆಳಕಿಗೆ ಬಂದಿದ್ದು, ಬಾಲಕಿ ಸ್ವ ಇಚ್ಚೆಯಿಂದ ತೆರಳಿದ್ದಳು ಎಂದು ತಿಳಿದು ಬಂದಿದೆ. ಬಾಲಕಿ ನೆಲಮಂಗಲದಿಂದ ಲಾಸ್ಟ್ ಬಸ್ ಹತ್ತಿ ಯಶವಂತಪುರ ಬಸ್ ನಿಲ್ದಾಣದಲ್ಲಿ ಇಳಿದಿದ್ದಳು. ಅಲ್ಲಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿ ಮೆಜೆಸ್ಟಿಕ್ನಿಂದ ರೇಜಾ ಎಂಬ ಯುವಕನ ಜೊತೆಗೂಡಿ ಮಂಡ್ಯದ ಮದ್ದೂರಿಗೆ ಪ್ರಯಾಣ ಬೆಳೆಸಿದ್ದರು.
ನೆಲಮಂಗಲ, (ಆಗಸ್ಟ್ 19): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಡೀ ನೆಲಮಂಗಲವನ್ನೇ ಬೆಚ್ಚಿಬೀಳಿಸಿದ್ದ ಬಾಲಕಿ ಕಿಡ್ನಾಪ್(Kidnap) ಪ್ರಕರಣ ಸುಖಾಂತ್ಯ ಕಂಡಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಅಡ್ರೆಸ್ ಕೇಳುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಸದ್ಯ ಪ್ರಕರಣ ತನಿಖೆ ಮುಗಿದು ಹೊಸ ತಿರುವು ಪಡೆದುಕೊಂಡಿದ್ದು ಬಾಲಕಿ ಪೋಷಕರನ್ನು ಸೇರಿದ್ದಾಳೆ. ಆದ್ರೆ ಈ ಕಿಡ್ನಾಪ್ ಹಿಂದಿನ ಸತ್ಯ ಅರಿತು ಪೊಲೀಸರೇ ದಂಗಾಗಿದ್ದಾರೆ.
ಬಿಹಾರ ಮೂಲದ ಹದಿನಾರು ವರ್ಷದ ಬಾಲಕಿ ತನ್ನ ಸ್ನೇಹಿತೆಯ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಪಹರಣ ಮಾಡಲಾಗಿತ್ತು. ಓರ್ವ ಮಹಿಳೆಯನ್ನೊಳಗೊಂಡ ಮೂರು ಮಂದಿ ರಾತ್ರಿ 11.23 ಸಮಯದಲ್ಲಿ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದರು ಎಂದು ಮೊದಲು ತಿಳಿದು ಬಂದಿತ್ತು. ಕಿಡ್ನಾಪ್ ಕುರಿತಾಗಿ ಬಾಲಕಿಯ ಅಕ್ಕ ನೆಲಮಂಗಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೀಘ್ರವೇ ತನಿಖೆಯನ್ನು ಪ್ರಾರಂಭಿಸಿದ ಪೋಲಿಸರು, ಪ್ರಕರಣದ ಇನ್ನೊಂದು ಮುಖವನ್ನು ಬಯಲಿಗೆಳೆದಿದ್ದಾರೆ.
ಪೋಲಿಸ್ ತನಿಖೆಯ ನಂತರ ಇದು ಕಿಡ್ನಾಪ್ ಪ್ರಕರಣವಲ್ಲ ಎಂಬುವುದು ಬೆಳಕಿಗೆ ಬಂದಿದ್ದು, ಬಾಲಕಿ ಸ್ವ ಇಚ್ಚೆಯಿಂದ ತೆರಳಿದ್ದಳು ಎಂದು ತಿಳಿದು ಬಂದಿದೆ. ಬಾಲಕಿ ನೆಲಮಂಗಲದಿಂದ ಲಾಸ್ಟ್ ಬಸ್ ಹತ್ತಿ ಯಶವಂತಪುರ ಬಸ್ ನಿಲ್ದಾಣದಲ್ಲಿ ಇಳಿದಿದ್ದಳು. ಅಲ್ಲಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿ ಮೆಜೆಸ್ಟಿಕ್ನಿಂದ ರೇಜಾ ಎಂಬ ಯುವಕನ ಜೊತೆಗೂಡಿ ಮಂಡ್ಯದ ಮದ್ದೂರಿಗೆ ಪ್ರಯಾಣ ಬೆಳೆಸಿದ್ದರು. ಮದ್ದೂರಿನಲ್ಲಿ ಬಾಡಿಗೆ ಮನೆಯನ್ನು ಮಾಡಿ ಇಬ್ಬರೂ ಎರಡು ದಿನ ವಾಸವಿದ್ರು. ಜಾಲಿ ಟ್ರಿಪ್ ಮಾಡ್ತಾ ಇದ್ರು. ಈ ಸಂದರ್ಭದಲ್ಲಿ ಬಾಲಕಿಯ ನಾನಾ ಬಗೆಯ ಫೋಟೋವನ್ನು ರೇಜಾ ಕ್ಲಿಕ್ಕಿಸಿದ್ದ. ಇತ್ತ ತನಿಖೆಯನ್ನು ಚುರುಕುಗೊಳಿದ ಪೊಲೀಸರ ತಂಡ ಮೊಬೈಲ್ ಟವರ್ ಆಧಾರದ ಮೇಲೆ ಜೋಡಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು, ಬಾಲಕಿಯನ್ನು ಪೋಷಕರ ಬಳಿ ಕಳುಹಿಸಿದ್ದಾರೆ. ಯುವಕನನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಪೋಲಿಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860, ರಿತ್ಯಾ 363 ಕಿಡ್ನಾಪ್ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ