ಡಿಕೆ ಶಿವಕುಮಾರ್ ಕಾವೇರಿ ನೀರನ್ನು ಕಳುವು ಮಾಡಿ ಕರ್ನಾಟಕದ ರೈತರಿಗೆ ದ್ರೋಹವೆಸಗಿದ್ದಾರೆ: ಕೆಎಸ್ ಈಶ್ವರಪ್ಪ

ಡಿಕೆ ಶಿವಕುಮಾರ್ ಕಾವೇರಿ ನೀರನ್ನು ಕಳುವು ಮಾಡಿ ಕರ್ನಾಟಕದ ರೈತರಿಗೆ ದ್ರೋಹವೆಸಗಿದ್ದಾರೆ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 20, 2023 | 5:53 PM

ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 26 ರಾಜಕೀಯ ಪಕ್ಷಗಳು ರಚಿಸಿಕೊಂಡಿರುವ ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಪಕ್ಷ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಅಸಮಾಧಾನ ಉಂಟಾಗದಿರಲು ಶಿವಕುಮಾರ್ ನೆರೆರಾಜ್ಯಕ್ಕೆ ನೀರು ಬಿಡುತ್ತಲೇ ಹೋಗಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ಬಹಳ ದಿನಗಳಿಂದ ತೂ ತೂ ಮೈ ಮೈ ನಡೀತಾ ಇದೆ, ಕನ್ನಡಿಗರಿಗೆಲ್ಲ ಗೊತ್ತಿರುವ ಸಂಗತಿ ಇದು. ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಈಶ್ವರಪ್ಪ, ಶಿವಕುಮಾರ್ ಕಾವೇರಿ ನೀರನ್ನು ನೇರವಾಗಿ ಕಳ್ಳತನ ಮಾಡಿ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ದ್ರೋಹವೆಸಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 26 ರಾಜಕೀಯ ಪಕ್ಷಗಳು ರಚಿಸಿಕೊಂಡಿರುವ ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಪಕ್ಷ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ (Tamil Nadu) ಅಸಮಾಧಾನ ಉಂಟಾಗದಿರಲು ಶಿವಕುಮಾರ್ ನೆರೆರಾಜ್ಯಕ್ಕೆ ನೀರು ಬಿಡುತ್ತಲೇ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ರೈತ ಸಂಘಟನೆಗಳು ಉಗ್ರರೂಪದ ಹೋರಾಟ ನಡೆಸಿದ ಬಳಿಕ ಎಚ್ಚೆತ್ತುಕೊಂಡ ಶಿವಕುಮಾರ್ ಈಗ ದೆಹಲಿಗೆ ಹೋಗಿ ಸಂಸದರೊಂದಿಗೆ ಸಭೆ ನಡೆಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಶಿವಕುಮಾರ್ ಹೇಳೋದೊಂದು ಮಾಡೋದೊಂದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಿದೊಂದೇ ಅವರ ಗುರಿಯಾಗಿದೆ ಎಂದ ಈಶ್ವರಪ್ಪ ತಿವಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ