ಅಭಿನವ ಸ್ವಾಮಿಗೆ ಸೇರಿದ ರೂ. 60 ಲಕ್ಷ ನಗದನ್ನು ಹಾಲಶ್ರೀ ಮಠದಲ್ಲಿ ಇಟ್ಟುಹೋದ ಪ್ರಣವ್ ವರ್ತನೆ ಗೊಂದಲಮಯವಾಗಿದೆ!

ಇವತ್ತು ಅವರು ಮಠಕ್ಕೆ ಬಂದಾಗ ಸ್ವಾಮಿಯ ತಂದೆ ಇರದ ಕಾರಣ ಹಣವನ್ನು ಮಠದ ಒಂದು ಭಾಗದಲ್ಲಿ ಇಟ್ಟು ಹೊರಬಂದಿದ್ದಾರೆ. ಹಣದ ಥೈಲಿ ಮಠದಲ್ಲಿಟ್ಟು ಹೊರಬರುವ ಮೊದಲು ಅವರು ಒಂದು ವಿಡಿಯೋ ಮಾಡಿಸಿದ್ದಾರೆ. ಅದರಲ್ಲಿ ಅವರು ಚೀಲದಲ್ಲಿರುವ ಹಣ ತೋರಿಸುತ್ತಾರೆ ಮತ್ತು ಜಿಪ್ ಎಳೆದು ಅದನ್ನು ಮುಚ್ಚಿ ಅದರ ಮೇಲೆ ಗೋಣಿಚೀಲ ಮುಚ್ಚಿದ ಬಳಿಕ ಕ್ಷೀಣವಾದ ಧ್ವನಿಯಲ್ಲಿ ‘ಹಾಲಶ್ರೀ ಅಭಿನವ ಸ್ವಾಮಿಗೆ ಸೇರಿದ ಹಣ ಇಲ್ಲಿಟ್ಟಿದ್ದೇನೆ’ ಅಂತ ಹೇಳುತ್ತಾರೆ.

ಅಭಿನವ ಸ್ವಾಮಿಗೆ ಸೇರಿದ ರೂ. 60 ಲಕ್ಷ ನಗದನ್ನು ಹಾಲಶ್ರೀ ಮಠದಲ್ಲಿ ಇಟ್ಟುಹೋದ ಪ್ರಣವ್ ವರ್ತನೆ ಗೊಂದಲಮಯವಾಗಿದೆ!
|

Updated on: Sep 20, 2023 | 7:47 PM

ಬಳ್ಳಾರಿ: ಚೈತ್ರಾ ಕುಂದಾಪುರಳ ಕ್ಯಾಶ್-ಫಾರ್-ಟಿಕೆಟ್ (Chaitra Kundapura cash-for-ticket case) ಪ್ರಕರಣದಲ್ಲಿ ಜಿಲ್ಲೆಯ ಹಿರೇ ಹಡಗಲಿ ಹಾಲಾಶ್ರೀ ಮಠದ ಅಭಿನವ ಸ್ವಾಮಿಗೆ (Abhinava Swamy) ಒಂದೂವರೆ ಕೋಟಿ ರೂ. ಸಂದಾಯವಾಗಿದ್ದು ಹೆಚ್ಚು ಕಡಿಮೆ ಸಾಬೀತಾಗಿದೆ. ಇವರ ಹೆಸರು ಪ್ರಣವ್ (Pranav) ಅಂತ, ಮೈಸೂರಿನವರು. ಕೆಲ ದಿನಗಳ ಹಿಂದೆ ಸ್ವಾಮಿಯ ಕಾರು ಚಾಲಕ 60 ಲಕ್ಷ ರೂ. ನಗದನ್ನು ಪ್ರಣವ್ ಅವರ ಕಚೇರಿಯಲ್ಲಿ ಬಿಟ್ಟು ಹೋಗಿದ್ದನಂತೆ. ಆದರೆ ಹಣ ಇಟ್ಟು ಹೋದ ನಂತರ ವಾಪಸ್ಸು ತೆಗೆದುಕೊಂಡು ಹೋಗಲು ಡ್ರೈವರ್ ಆಗಲೀ ಆಥವಾ ಅಭಿನವ ಸ್ವಾಮಿಯಾಗಲೀ ಬಾರದ ಕಾರಣ ಖುದ್ದು ಪ್ರಣವ್ ಅವರೇ ಹಣವನ್ನು ಹಿಂತಿರುಗಿಸಲು ಮೈಸೂರಿಂದ ಬಳ್ಳಾರಿ ಜಿಲ್ಲೆಯ ಹಿರೇ ಹಡಗಲಿಯಲ್ಲಿರುವ ಹಾಲಶ್ರೀ ಮಠಕ್ಕೆ ಆಗಮಿಸಿದ್ದಾರೆ. ಮಠದಲ್ಲಿ ಅಭಿನವ ಸ್ವಾಮಿಯ ತಂದೆ ಇರುತ್ತಾರೆ ಅಂತ ಪ್ರಣವ್ ಗೆ ಗೊತ್ತಿತ್ತಂತೆ. ಆದರೆ, ಇವತ್ತು ಅವರು ಮಠಕ್ಕೆ ಬಂದಾಗ ಸ್ವಾಮಿಯ ತಂದೆ ಇರದ ಕಾರಣ ಹಣವನ್ನು ಮಠದ ಒಂದು ಭಾಗದಲ್ಲಿ ಇಟ್ಟು ಹೊರಬಂದಿದ್ದಾರೆ. ಹಣದ ಥೈಲಿ ಮಠದಲ್ಲಿಟ್ಟು ಹೊರಬರುವ ಮೊದಲು ಅವರು ಒಂದು ವಿಡಿಯೋ ಮಾಡಿಸಿದ್ದಾರೆ. ಅದರಲ್ಲಿ ಅವರು ಚೀಲದಲ್ಲಿರುವ ಹಣ ತೋರಿಸುತ್ತಾರೆ ಮತ್ತು ಜಿಪ್ ಎಳೆದು ಅದನ್ನು ಮುಚ್ಚಿ ಅದರ ಮೇಲೆ ಗೋಣಿಚೀಲ ಮುಚ್ಚಿದ ಬಳಿಕ ಕ್ಷೀಣವಾದ ಧ್ವನಿಯಲ್ಲಿ ‘ಹಾಲಶ್ರೀ ಅಭಿನವ ಸ್ವಾಮಿಗೆ ಸೇರಿದ ಹಣ ಇಲ್ಲಿಟ್ಟಿದ್ದೇನೆ’ ಅಂತ ಹೇಳುತ್ತಾರೆ.

ಪ್ರಣವ್ ನಡೆ-ನುಡಿ ಸಂಶಯಾಸ್ಪದವಾಗಿದೆ ಮಾರಾಯ್ರೇ. ಇವರು ಸ್ವಾಮಿ ಪರಿಚಯಸ್ಥರಾಗಿರಬೇಕು. ಇಲ್ಲವಾದರೆ, ಸ್ವಾಮಿಯ ಚಾಲಕ ಅಷ್ಟು ದೊಡ್ಡ ಮೊತ್ತ ಇವರಲ್ಲಿ ಯಾಕೆ ಇಡುತ್ತಾನೆ? ಅಲ್ಲದೆ ಸ್ವಾಮಿಯ ಬಗ್ಗೆ ಎಲ್ಲರಿಗೂ ಗೊತ್ತಾಗಿರುವುದರಿಂದ ಪ್ರಣವ್ ಹಣವನ್ನು ಪೊಲೀಸರಿಗೆ ತಲುಪಿಸುವ ಬದಲು ಮಠಕ್ಕೆ ಯಾಕೆ ತರುತ್ತಾರೆ? 60 ಲಕ್ಷ ರೂಪಾಯಿಗಳನ್ನು ಯಾರಾದರೂ ಹಾಗೆ ಅನಾಥವಾಗಿ ಬಿಟ್ಟು ಹೋಗುತ್ತಾರೆಯೇ? ಗೊಂದಲಮಯವಾಗಿದೆ ಪ್ರಣವ್ ವರ್ತನೆ!!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ