ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧಿಸಿದಂತೆ ಚರ್ಚಿಸಲು ಗುರುವಾರ ಒಂದು ಸಭೆ ಕರೆಯಲಾಗಿದೆ: ಹೆಚ್ ಡಿ ಕುಮಾರಸ್ವಾಮಿ
ಸಭೆಯಲ್ಲಿ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿದ ಬಳಿಕ ಮೈತ್ರಿಯ ಸ್ವರೂಪದ ಬಗ್ಗೆ ಒಂದು ಚಿತ್ರಣ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಸೀಟು ಹೊಂದಾಣಿಕೆ ಬಗ್ಗೆ ಎರಡು ಪಕ್ಷಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಕಳೆದ 2 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಟ್ಟ ಅಡಳಿತ ನೀಡಿರುವ ಹಿನ್ನೆಲೆಯಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷದ ಅವಶ್ಯಕತೆಯನ್ನು ಬಿಜೆಪಿ ಮತ್ತು ತಮ್ಮ ಪಕ್ಷಗಳ ನಾಯಕರು ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ಲೋಕಸಭಾ ಚುನಾವಣೆಗೆ (Lok Sabha Polls) ಮೊದಲು ಜೆಡಿಎಸ್-ಬಿಜೆಪಿ ನಡುವಿನ ಮೈತ್ರಿ (BJP-JDS alliance) ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ಇದುವರೆಗೆ ಯಾವುದೇ ನಿರ್ಧಾರವನ್ನು ಎರಡೂ ಪಕ್ಷಗಳು ಪ್ರಕಟಿಸಿಲ್ಲ ಎಂದು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಜಿಲ್ಲೆಯ ಚನ್ನಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ, ಇದುವರೆಗೆ ಕೇವಲ ಊಹಾಪೋಹಗಳು ಕೇಳಿಬಂದಿವೆ, ಮಾತುಕತೆ ಮಾತ್ರ ನಡೆದಿಲ್ಲ. ಮೈತ್ರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಒಂದು ಸಭೆಯನ್ನು ಗರುವಾರ ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿದ ಬಳಿಕ ಮೈತ್ರಿಯ ಸ್ವರೂಪದ ಬಗ್ಗೆ ಒಂದು ಚಿತ್ರಣ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಸೀಟು ಹೊಂದಾಣಿಕೆ ಬಗ್ಗೆ ಎರಡು ಪಕ್ಷಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಕಳೆದ 2 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಟ್ಟ ಅಡಳಿತ ನೀಡಿರುವ ಹಿನ್ನೆಲೆಯಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷದ ಅವಶ್ಯಕತೆಯನ್ನು ಬಿಜೆಪಿ ಮತ್ತು ತಮ್ಮ ಪಕ್ಷಗಳ ನಾಯಕರು ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ